
ಕನ್ನಡ ಚಿತ್ರರಸಿಕರಿಗೆ ಈ ಬಾರಿಯ ದೀಪಾವಳಿ ತುಂಬಾ ವಿಶೇಷವಾಗಿರಲಿದೆ. ಸಿಹಿಯಾದ ಕಜ್ಜಾಯದ ಜೊತೆ ‘ಕೆ.ಜಿ.ಎಫ್’ ಚಿತ್ರತಂಡದಿಂದ ಬಂಪರ್ ಉಡುಗೊರೆ ಸಹ ಸಿಗುತ್ತಿದೆ. ಅದೇನು ಅಂತೀರಾ ಆ ಕುರಿತ ಒಂದು ವರದಿ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆ.ಜಿ.ಎಫ್’ ಸಿನಿಮಾ ಆರಂಭವಾದಾಗಿನಿಂದ ಇಲ್ಲಿಯವರೆಗೂ ಯಾವುದೇ ಸುದ್ದಿ ಬಂದರೂ ಅಭಿಮಾನಿಗಳಿಗೆ ಅದು ಒಂದು ರೀತಿಯ ಹಬ್ಬದಂತೇ ಆಗಿ ಹೋಗಿದೆ. ಸದ್ಯ ಅಂತಹುದೇ ಒಂದು ವಿಷಯ ‘ಕೆ.ಜಿ.ಎಫ್’ ಚಿತ್ರತಂಡದಿಂದ ಹೊರಬಿದ್ದಿದೆ. ಇದು ಸಿನಿರಸಿಕರ ಪಾಲಿಗೆ ಹಬ್ಬಕ್ಕೂ ಮುನ್ನ ಸಿಹಿ ಸವಿದಷ್ಟು ಆನಂದವನ್ನ ಕೊಡುವುದರಲ್ಲಿ ಅನುಮಾನವೇ ಇಲ್ಲ.
ಹೌದು ಕೆ.ಜಿ.ಎಫ್’ ಚಿತ್ರತಂಡದಿಂದ ಶುಭ ಸುದ್ದಿ ಸಿಕ್ಕಿದೆ. ಅದರಂತೆ ರೆ ದೀಪಾವಳಿ ಹಬ್ಬದಂದು ಅಂದರೆ ನ.9ರಂದು ‘ಕೆ.ಜಿ.ಎಫ್’ ಚಿತ್ರದ ಟ್ರೈಲರ್ ಭರ್ಜರಿಯಾಗಿ ರಿಲೀಸ್ ಆಗಲಿದೆ. ಅಂದಹಾಗೆ ಈ ಸಿನಿಮಾ ಕನ್ನಡ ಅಲ್ಲದೆ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲೂ ತೆರೆಕಾಣಲಿದ್ದು, ಒಂದೇ ದಿನ ಐದೂ ಭಾಷೆಗಳ ಟ್ರೈಲರ್ ಬಿಡುಗಡೆಯಾಗಲಿದೆ.
ಇನ್ನು ‘ಕೆ.ಜಿ.ಎಫ್’ ಚಿತ್ರದ ಪ್ರಚಾರಕ್ಕೆ ಚಾಲನೆ ಕೊಡಲು ಚಿತ್ರತಂಡ ಸಿದ್ದವಾಗಿದೆ. ಅದಕ್ಕೂ ಮುನ್ನ ದೇವರ ಮೊರೆ ಹೋಗಲಾಗಿದ್ದು, ಶಿರಡಿ ಸಾಯಿಬಾಬಾ ಹಾಗೂ ಕೊಲ್ಲಾಪುರಿಯ ಲಕ್ಷ್ಮೀ ದೇವಿಯ ದರ್ಶನ ಪಡೆದಿದ್ದಾರೆ.
ಒಟ್ಟಾರೆ ಪ್ರತಿ ಹಂತದಲ್ಲಿಯೂ ತನ್ನ ಗುಣಾತ್ಮಕ ವಿಷಯಗಳಿಂದಲೇ ನಿರೀಕ್ಷೆಯನ್ನ ಏರಿಸಿಕೊಂಡು ಹೋಗುತ್ತಿರೋ ಈ ಚಿತ್ರ ಟ್ರೈಲರ್ ಹೊರಬಿದ್ದ ಮೇಲೆ ದೊಡ್ಡ ಕ್ರೇಜ್ ಹುಟ್ಟುಹಾಕುವುದರಲ್ಲಿ ಅನುಮಾನವಿಲ್ಲ ಎನ್ನಬಹುದು.
Comments are closed.