ಮನೋರಂಜನೆ

ಸಂಗೀತ ದಿಗ್ಗಜ ಎ.ಆರ್​. ರೆಹಮಾನ್ ಕೂಡ ಆತ್ಮಹತ್ಯೆಗೆ ಮುಂದಾಗಿದ್ದರಂತೆ !

Pinterest LinkedIn Tumblr

ಚಿತ್ರರಂಗದ ಅನೇಕ ನಟ-ನಟಿಯರು ತಾವು ಅನುಭವಿಸಿದ ಖಿನ್ನತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಅನೇಕಬಾರಿ ಆತ್ಮಹತ್ಯೆ ಬಗ್ಗೆ ಚಿಂತನೆ ನಡೆಸಿದ ಬಗ್ಗೆಯೂ ಹೇಳಿಕೊಂಡ ಉದಾಹರಣೆಗಳಿವೆ. ಖ್ಯಾತ ಸಂಗೀತ ಸಂಯೋಜಕ ಎ.ಆರ್​. ರೆಹಮಾನ್​​ ಜೀವನದಲ್ಲೂ ಕೂಡ ಇದೇ ರೀತಿ ಆಗಿತ್ತಂತೆ.

ಕೃಷ್ಣ ತ್ರಿಲೋಕ್​ ಅವರು ಬರೆದ, ‘ನೋಟ್ಸ್​​ ಆಫ್​ ಡ್ರೀಮ್​: ದಿ ಅಥರೈಸ್ಡ್​​ ಬಯೋಗ್ರಫಿ ಆಫ್​ ರೆಹಮಾನ್​’ ಪುಸ್ತಕ ಇತ್ತೀಚೆಗೆ ಬಿಡುಗಡೆ ಆಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿದ್ದ ರೆಹಮಾನ್​, ಜೀವನದಲ್ಲಿ ಕಳೆದ ಕಹಿ ದಿನಗಳನ್ನು ನೆನೆದಿದ್ದಾರೆ. ಅಷ್ಟೇ ಅಲ್ಲ ಆ ದಿನಗಳು ನನ್ನಲ್ಲಿ ಆತ್ಮಸ್ಥೈರ ತುಂಬಿದೆ ಎಂದು ಹೇಳಿಕೊಂಡಿದ್ದಾರೆ. ‘ನಾನು ಆಗಿನ್ನೂ ಚಿಕ್ಕವನು. ಎಲ್ಲರೂ ನನ್ನನ್ನು ನಿರರ್ಥಕ ಎಂದೇ ಭಾವಿಸುತ್ತಿದ್ದರು. ನಾನು 9 ವರ್ಷದವನಿದ್ದಾಗ ತಂದೆ ಮೃತಪಟ್ಟರು. ಹೀಗೆ ನೂರಾರು ಘಟನೆಗಳು ನನ್ನ ಜೀವನದಲ್ಲಿ ನಡೆಯುತ್ತಿದ್ದವು. ಆಗೆಲ್ಲ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಿದೆ. ಈ ರೀತಿಯ ಯೋಚನೆ 25ನೇ ವಯಸ್ಸಿನವರೆಗೂ ಬರುತ್ತಲೇ ಇತ್ತು’ ಎಂದಿದ್ದಾರೆ ರೆಹಮಾನ್​.

ಜೀವನದಲ್ಲಿ ನಡೆದ ಪ್ರತಿ ಕಹಿ ಘಟನೆಯೂ ನನ್ನನ್ನು ಬಲಶಾಲಿಯನ್ನಾಗಿ ಮಾಡಿದೆ ಎನ್ನುವ ರೆಹಮಾನ್, ‘ಹುಟ್ಟಿದ ಪ್ರತಿ ವ್ಯಕ್ತಿ, ಜೀವಿಯೂ ಸಾಯುತ್ತದೆ. ಹಾಗಿರುವಾಗ ನಾವು ಸಾವಿಗೆ ಏಕೆ ಭಯಪಡಬೇಕು? ನನ್ನ ತಂದೆ ತೀರಿಕೊಂಡಾಗ ನಾನು ತುಂಬ ಭಯಪಟ್ಟಿದ್ದೆ. ನಂತರ ನಿಧಾನವಾಗಿ ಎಲ್ಲವನ್ನೂ ಕಲಿಯಲು ಆರಂಭಿಸಿದೆ’ ಎನ್ನುತ್ತಾರೆ. ಕೃಷ್ಣ ಅವರು ಬರೆದ ಈ ಪುಸ್ತಕದಲ್ಲಿ ರೆಹಮಾನ್​ ಜೀವನದ ಪ್ರತಿ ಹಂತವನ್ನೂ ಚಿತ್ರಿಸಲಾಗಿದೆಯಂತೆ.

Comments are closed.