ಮನೋರಂಜನೆ

24 ಕಿಸ್ ಗಳಿಗೆ ದಿನಾಂಕ ನಿಗದಿ ಮಾಡಿಕೊಂಡ ‘ಅಧ್ಯಕ್ಷ’ ಖ್ಯಾತಿಯ ನಟಿ ಹೆಬ್ಬಾ ಪಟೇಲ್ ..!

Pinterest LinkedIn Tumblr


ಮುಂಬೈ ಮೂಲಕ ಬೆಡಗಿ ಹೆಬ್ಬಾ ಪಟೇಲ್​ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿರುವ ಬಹು ಭಾಷಾ ನಟಿ. ಈಕೆ ಈಗ ಚುಂಬನದ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಹೌದು

ಕನ್ನಡದ ‘ಅಧ್ಯಕ್ಷ’, ತೆಲುಗಿನ ‘ಅಲಾ ಇಲಾ’, ‘ಕುಮಾರಿ 21 ಎಫ್’ ಸೇರಿದಂತೆ ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ಹೆಬ್ಬಾ ಅವರಿಗೆ 2015ರಲ್ಲಿ ತೆಲುಗಿನಲ್ಲಿ ಅಭಿನಯಿಸಿದ್ದ ‘ಕುಮಾರಿ 21 ಎಫ್’ ಸಿನಿಮಾ ರಾತ್ರೋರಾತ್ರಿ ಹೆಸರು ತಂದುಕೊಟ್ಟಿತ್ತು.

ಈ ಸಿನಿಮಾದಿಂದ ಹೆಸರು ಮಾಡಿದ ಹೆಬ್ಬಾ ತೆಲುಗಿನಲ್ಲಿ 6ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಇವರು ಆದಿತ್​ ಅರುಣ್​ ಎಂಬ ನಟನಿಗೆ ಚುಂಬಿಸೋಕೆ ದಿನಾಂಕ ನಿಗದಿಯಾಗಿದೆ. ಈ ಹಿಂದೆ ಸಹ ಈ ಚುಂಬನದ ವಿಷಯಕ್ಕೆ ದಿನಾಂಕ ನಿಗದಿಯಾಗಿ ಅದು ಮುಂದಕ್ಕೆ ಹೋಗಿತ್ತು. ಅದರಿಂದಾಗಿಯೇ ಹೆಬ್ಬಾ ಸುದ್ದಿಯಾಗಿದ್ದರು.

ಚುಂಬನಕ್ಕೆ ದಿನಾಂಕ ನಿಗದಿ ಎಂದ ಕೂಡಲೇ ಕಣ್ಣು-ಬಾಯಿ ಬಿಡುವ ಅಗತ್ಯವಿಲ್ಲ. ಈ ಇಬ್ಬರು ಅಭಿನಯಿಸಿರುವ ತೆಲುಗು ಸಿನಿಮಾ’24 kisses’ ಇದೇ ತಿಂಗಳು 23ಕ್ಕೆ ತೆರೆಕಾಣಲಿದೆ. ಈ ಹಿಂದೆ ಸಹ ಈ ಸಿನಿಮಾದ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿತ್ತು.

‘ಮಿಣುಗುರುಲು’ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ಆದಿತ್​ ಅರುಣ್​ ಈ ಸಿನಿಮಾದಲ್ಲಿ ನಾಯಕನಾಗಿದ್ದು, ಇದರಲ್ಲಿ ಶೀರ್ಷಿಕೆಯಲ್ಲಿ ಹೇಳಿರುವಂತೆಯೇ ಸಾಕಷ್ಟು ಬೋಲ್ಡ್​ ದೃಶ್ಯಗಳಿವೆ. ಇತ್ತೀಚೆಗೆ ಇಂತಹ ಸಿನಿಮಾಗಳೂ ಸಹ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡುತ್ತಿವೆ.

Comments are closed.