
ಮುಂಬೈ: ತಮ್ಮ 53ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಬಾಲಿವುಡ್ ಬಾದಷಾ ಶಾರುಖ್ ಖಾನ್ ಗೆ ಪೊಲೀಸರು ತಡೆಯೊಡ್ಡಿದ ಘಟನೆ ನಡೆದಿದೆ. ಝೀರೋ ಚಿತ್ರದ ಟ್ರೈಲರ್ ಬಿಡುಗಡೆ ಸಂತಸದಲ್ಲಿರುವ ಕಿಂಗ್ ಖಾನ್ ಬಾಂದ್ರಾದಲ್ಲಿರುವ ನೈಟ್ ಕ್ಲಬ್ ‘ಅರ್ಥ’ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ತಡೆಯೊಡ್ಡಿದ್ದಾರೆ.
ಸಾಮಾನ್ಯವಾಗಿ ರೆಸ್ಟೋರೆಂಟ್ ಗಳನ್ನು ತಡರಾತ್ರಿಯವರೆಗೆ ತೆರೆದಿರುವುದಿಲ್ಲ ಆದರೆ ಶುಕ್ರವಾರದಂದು ಕನಿಷ್ಠ ಮೂರು ಘಂಟೆಯವರೆಗೆ ನಿರಂತರ ಮ್ಯೂಸಿಕ್ ಮೂಲಕ ಶಾರುಖ್ ಪಾರ್ಟಿ ನಡೆಯುತ್ತಿರುವುದನ್ನು ಗಮನಿಸಿದ ಪೊಲೀಸರು ಇದಕ್ಕೆ ಅಡ್ಡಿ ಪಡಿಸಿದ್ದಾರೆ.ತದನಂತರ ಶಾರುಖ್ ಅರ್ಧದಲ್ಲಿಯೇ ತಮ್ಮ ಸ್ನೇಹಿತರ ಜೊತೆ ಪಾರ್ಟಿಯಿಂದ ಹೊರಬಂದಿದ್ದಾರೆ.
ಪೊಲೀಸರು ಬರುದಕ್ಕೂ ಮೊದಲು ಹಲವು ಸೆಲೆಬ್ರಿಟಿಗಳು ಆಗಲೇ ಅಲ್ಲಿಂದ ತೆರಳಿದ್ದರು ಎಂದು ತಿಳಿದು ಬಂದಿದೆ. ರೆಸ್ಟೋರೆಂಟ್ ಸಾಮಾನ್ಯವಾಗಿ ರಾತ್ರಿ ಒಂದು ಗಂಟೆಯವರೆಗೆ ತೆರದಿರುತ್ತದೆ ತಡವಾಗಿದ್ದರಿಂದ ಪೊಲೀಸರು ಮದ್ಯಪ್ರವೆಶಿಸಬೇಕಾಯಿತು. ಸ್ವರಾ ಭಾಸ್ಕರ್, ಬಾಸ್ಕೊ ಸೀಸರ್ ಮತ್ತು ‘ಝೀರೋ’ ಹೆಲ್ಮರ್ ಆನಂದ್ ಎಲ್ ರಾಯ್ ಪಾರ್ಟಿ ಯಲ್ಲಿ ಹಾಜರಿದ್ದರು ಎಂದು ತಿಳಿದುಬಂದಿದೆ.
Comments are closed.