ಮನೋರಂಜನೆ

ಶಾರೂಖ್, ಅಮೀರ್​​​ ಖಾನ್’ರ ಸಿನೆಮಾವನ್ನೇ ಹಿಂದಿಕ್ಕಿದ ನಟ ಯಶ್ ಅಭಿನಯದ ಕೆಜಿಎಫ್ !

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಇದೀಗ ಬಾಲಿವುಡ್ ಸೂಪರ್ ಸ್ಟಾರ್ ನಟರಿಗೂ ತೀವ್ರ ಪೈಪೋಟಿ ನೀಡುತ್ತಿದ್ದು, ಅಮೀರ್ ಖಾನ್, ಶಾರುಖ್ ಖಾನ್ ರನ್ನೇ ಹಿಂದಿಕ್ಕಿದ್ದಾರೆ.

ಪ್ರಸ್ತುತ ಯಶ್ ಅಭಿನಯದ ಕೆಜಿಎಫ್ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಕೇವಲ ಕರ್ನಾಟಕ ಮಾತ್ರವಲ್ಲದೇ ಯಶ್ ಅಭಿನಯದ ಚಿತ್ರ ಕೆಜಿಎಫ್ ಭಾರತದ ಮೂರನೇ ಬಹು ನಿರೀಕ್ಷಿತ ಚಿತ್ರವಾಗಿದೆ.

ಹೌದು.. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಿತ್ರದ ಹವಾ ಎಷ್ಟರ ಮಟ್ಟಿಗಿದೆ ಅಂದ್ರೆ, ಖ್ಯಾತ ಸಿನಿಮಾ ರೇಟಿಂಗ್ ವೆಬ್ ಸೈಟ್ ಐಎಂಡಿಬಿಯ ಮೋಸ್ಟ್‌ ಆ್ಯಂಟಿಸಿಪೇಟೆಡ್‌ ಗ್ಲೋಬಲ್‌ ಮೂವಿಸ್ ಹಾಗೂ ಟಿವಿ ಟ್ರೆಂಡಿಂಗ್‌ ನ ಹಲವು ಭಾಷೆಗಳ ಚಿತ್ರಗಳ ಲಿಸ್ಟ್‌ನಲ್ಲಿ 3ನೇ ಸ್ಥಾನದಲ್ಲಿದೆ. ಬಾಲಿವುಡ್‌ ಬಾದ್ ಷಾ ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರ, ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಗಳನ್ನು ಕೆಜಿಎಫ್ ಹಿಂದಿಕ್ಕಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇನ್ನು ಪಟ್ಟಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ರೋಬೋ 2.0 ಚಿತ್ರ ಶೇ. 53.1 ರೇಟಿಂಗ್ಸ್ ನೊಂದಿಗೆ ಮೊದಲ ಸ್ಥಾನದಲ್ಲಿದ್ದು, ನಟ ವಿಜಯ್ ಅಭಿನಯದ ತಮಿಳು ಚಿತ್ರ ಸರ್ಕಾರ್ ಶೇ.27.3ರಷ್ಟು ರೇಟಿಂಗ್ಸ್ ನೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು ಯಶ್ ಅಭಿನಯದ ಕೆಜಿಎಫ್ ಚಿತ್ರ ಶೇ.5.7ರಷ್ಚು ರೇಟಿಂಗ್ಸ್ ನೊಂದಿಗೆ 3ನೇ ಸ್ಥಾನದಲ್ಲಿದ್ದು, ಶಾರುಖ್ ಅಭಿನಯದ ಝೀರೋ ಶೇ.4.9 ಮತ್ತು ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ ಶೇ.4.0 ರೇಟಿಂಗ್ಸ್ ನೊಂದಿಗೆ 4 ಮತ್ತು ಐದನೇ ಸ್ಥಾನಗಳಲ್ಲಿವೆ.

ಉಳಿದಂತೆ ಐಎಂಡಿಬಿಯ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕ್ರಮವಾಗಿ ಅರ್ಜುನ್ ರೆಡ್ಡಿ ಖ್ಯಾತಿ ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲಾ, ಸನ್ನಿ ಡಿಯೋಲ್ ಅಭಿನಯದ ಮೊಹಲ್ಲಾ ಅಸ್ಸಿ, ಮಿರ್ಜಾಪುರ್, ಪಿಹು ಮತ್ತು ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿಖಾನ್ ಅಭಿನಯದ ಕೇದಾರ್ ನಾಥ್ ಚಿತ್ರಗಳು ಟಾಪ್ 10 ಪಟ್ಟಿಯಲ್ಲಿವೆ.

Comments are closed.