ಮನೋರಂಜನೆ

ಬಿಡುಗಡೆಗೂ ಮುನ್ನವೇ ಪ್ರದರ್ಶನ ಕಂಡ ಶೃತಿ ಹರಿಹರನ್ ಅಭಿನಯದ ‘ನಾತಿಚರಾಮಿ

Pinterest LinkedIn Tumblr


ಕಳೆದ ಕೆಲ ದಿನಗಳಿಂದ ವಿವಾದದಿಂದ ಸುದ್ದಿಯಲ್ಲಿರುವ ನಟಿ ಶ್ರುತಿ ಹರಿಹರನ್ ಈಗ ಹೊಸ ಸಿನಿಮಾ ಮೂಲಕ ಸದ್ದು ಮಾಡಿದ್ದಾರೆ. ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ (ಎಂಎಎಂಐ) ಸಂಸ್ಥೆಯು ಏರ್ಪಡಿಸುವ ಪ್ರತಿಷ್ಠಿತ ಮುಂಬೈ ಚಲನಚಿತ್ರೋತ್ಸವದಲ್ಲಿ ಶ್ರುತಿ ಅಭಿನಯದ ‘ನಾತಿಚರಾಮಿ’ ಪ್ರದರ್ಶನ ಕಂಡಿದೆ.

ಇನ್ನೂ ಬಿಡುಗಡೆಯಾಗದ ಈ ಸಿನಿಮಾವನ್ನು ಫಿಲಂ ಫೆಸ್ಟಿವಲ್​ನಲ್ಲಿ ಪ್ರದರ್ಶಿಸಲಾಗಿದ್ದು, ಚಿತ್ರಕ್ಕೆ ಅದ್ಭುತ ವಿಮರ್ಶೆ ಸಿಕ್ಕಿದೆ. ಈ ಸಿನಿಮಾವನ್ನು ‘ಹರಿವು’ ಚಿತ್ರ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನಸೋರೆ ನಿರ್ದೇಶಿಸಿದ್ದಾರೆ.

ಈ ಮಹಿಳಾ ಪ್ರಧಾನ ಕಥೆ ಹೊಂದಿರುವ ಚಿತ್ರದ ಪ್ರದರ್ಶನವನ್ನು ಇಂದು ೪.೩೦ ಕ್ಕೆ ಏರ್ಪಡಿಸಲಾಗಿತ್ತು. ನಾತಿಚರಾಮಿ ಚಿತ್ರವು ಮಹಿಳೆಯರ ಒಂಟಿತನ ಮತ್ತು ಲೈಂಗಿಕ ಜೀವನದ ಮೇಲೆ ಬೆಳಕು ಚೆಲ್ಲಿದೆ ಎನ್ನಲಾಗಿದೆ. ಮೀಟೂ ಅಭಿಯಾನದ ಅಡಿಯಲ್ಲಿ ಸುದ್ದಿಯಲ್ಲಿದ್ದ ಶ್ರುತಿ ಹರಿಹರನ್ ಅವರ ಈ ಸಿನಿಮಾ ಭಾವನಾತ್ಮಕ ಮತ್ತು ಲೈಂಗಿಕ ಬದುಕಿನ ಅಂಶಗಳ ಮೇಲೆ ಬಿಂಬಿತವಾಗಿರುವುದು ವಿಶೇಷ. ಶ್ರುತಿಯ ಅಭಿನಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿದೆ. ಈ ಸಿನಿಮಾದ ಮತ್ತೊಂದು ಮುಖ್ಯ ಪಾತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ.

Comments are closed.