ರಾಷ್ಟ್ರೀಯ

ಅಂಬೇಡ್ಕರ್​ ಓದಿದ್ದೇ ಬ್ರಿಟಿಷರಿಂದ:, ಅವರು ಇನ್ನೂ 100 ವರ್ಷ ಆಳಿದ್ದರೆ ನಾವು ಉದ್ಧಾರವಾಗುತ್ತಿದ್ದೆವು!; ಬಿಎಸ್​ಪಿ ನಾಯಕ

Pinterest LinkedIn Tumblr


ಜೈಪುರ: ಭಾರತಕ್ಕೆ ಸ್ವಾತಂತ್ರ್ಯ ಲಭಿಸಲು ನಮ್ಮ ದೇಶದಲ್ಲಿ ಎಂತೆಂಥಾ ರಕ್ತಕ್ರಾಂತಿಯೇ ಆಯಿತು, ಎಷ್ಟೆಷ್ಟೋ ಹೋರಾಟಗಾರರು ಪ್ರಾಣತ್ಯಾಗ ಮಾಡಿದರು. ಅವರೆಲ್ಲರ ಶ್ರಮದ ಫಲವಾಗಿ ಬ್ರಿಟಿಷರಿಂದ ಮುಕ್ತಿ ಸಿಕ್ಕು 71 ವರ್ಷಗಳಾದವು. ಆದರೆ, ಬಿಎಸ್​ಪಿ ಮುಖಂಡ ಧರ್ಮವೀರ ಸಿಂಗ್​ ಹೇಳುವ ಪ್ರಕಾರ, ಬ್ರಿಟಿಷರು ಇನ್ನೂ 100 ವರ್ಷ ದೇಶವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರೆ ನಾವೆಲ್ಲ ಉದ್ಧಾರವಾಗುತ್ತಿದ್ದೆವು!

ಹೌದು, ಬಿಎಸ್​ಪಿ ನಾಯಕನ ಈ ಹೇಳಿಕೆ ಸದ್ಯಕ್ಕೆ ವಿವಾದ ಸೃಷ್ಟಿಸಿದೆ. ಇಂದು ಜೈಪುರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬ್ರಿಟಿಷ್​ ಪರವಾಗಿ ಮಾತನಾಡಿರುವ ಧರ್ಮಸಿಂಗ್​, ಬ್ರಿಟಿಷರು ಭಾರತವನ್ನು ಇನ್ನೂ ನೂರು ವರ್ಷ ಆಳ್ವಿಕೆ ಮಾಡಿದ್ದರೆ ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗದವರಿಗೆ ಇಷ್ಟೊಂದು ಅನ್ಯಾಯವಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂಬೇಡ್ಕರ್​ ಓದಿದ್ದೇ ಬ್ರಿಟಿಷರಿಂದ:

ನಮ್ಮ ಸಂವಿಧಾನವನ್ನು ರಚಿಸಿರುವ ಡಾ. ಬಿ.ಆರ್​. ಅಂಬೇಡ್ಕರ್​ ಅವರಿಗೆ ಓದಲು ಅವಕಾಶ ಕಲ್ಪಿಸಿಕೊಟ್ಟಿದ್ದು ಬ್ರಿಟಿಷರು. ಅವರಿಗೆ ವಿದೇಶದಲ್ಲಿ ಕಲಿಯಲು ಅವಕಾಶ ನೀಡದಿದ್ದರೆ ಸಮಾಜದಲ್ಲಿ ಇಷ್ಟೊಂದು ಬದಲಾವಣೆ ತರಲು ಸಾಧ್ಯವಾಗುತ್ತಿರಲಿಲ್ಲ. ಒಂದುರೀತಿಯಲ್ಲಿ ನಮ್ಮ ಸಂವಿಧಾನ ರಚನೆಯಾಗಲು ಬ್ರಿಟಿಷರ ಕೊಡುಗೆಯೂ ಇದೆ ಎನ್ನಬಹುದು. ಒಂದುವೇಳೆ ಬ್ರಿಟಿಷರು ಭಾರತಕ್ಕೆ ಬರದಿದ್ದರೆ ಅಂಬೇಡ್ಕರ್​ ಅವರನ್ನೊಳಗೊಂಡು ಯಾವ ಹಿಂದುಳಿದ ವರ್ಗದವರಿಗೂ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಧರ್ಮವೀರ ಸಿಂಗ್​ ಅವರ ಮಾತುಗಳ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಭಾರೀ ವಿರೋಧ ವ್ಯಕ್ತವಾಗಿದೆ. ಈ ರೀತಿ ಹೇಳುವ ಮೂಲಕ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಅವರು ಅವಮಾನಿಸಿದ್ದಾರೆ. ಬ್ರಿಟಿಷರ ಆಡಳಿತ ಅಷ್ಟೊಂದು ಇಷ್ಟವಾದರೆ ಅವರ ಋಣ ತೀರಿಸಲು ಇಂಗ್ಲೆಂಡ್​ಗೇ ಹೋಗಿ ನೆಲೆಸಲಿ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

Comments are closed.