ಮನೋರಂಜನೆ

ಶ್ರುತಿ ಹರಿಹರನ್ ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಅರ್ಜುನ್ ಸರ್ಜಾ

Pinterest LinkedIn Tumblr

ಬೆಂಗಳೂರು: ನಟ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ವಿರುದ್ಧದ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿದ್ದು ಇದೀಗ ನಟ ಅರ್ಜುನ್ ಸರ್ಜಾ ಶ್ರುತಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.

5 ಕೋಟಿ ರು. ಬೇಡಿಕೆ ಇಟ್ಟು ನಟಿ ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಮಾನನಷ್ಟ ಪ್ರಕರಣ ದಾಖಲಿಸಿದ್ದು ದ್ರುವ ಸರ್ಜಾ ಮೂಲಕ ನಟ ಮೊಕದ್ದಮೆ ದಾಖಲು ಮಾಡಿದಾರೆ.

ಶ್ರುತಿ ಆರೋಪಗಳು ಗಂಭೀರವಾಗಿದ್ದು ಅವರ ಜತೆ ಸಂಧಾನ ಸಾಧ್ಯವೇ ಇಲ್ಲ ಎಂದು ನಟ ಅರ್ಜುನ್ ಸರ್ಜಾ ಹೇಳಿದ್ದಾರೆ. ಸಧ್ಯ ಅವರು ಚೆನ್ನೈನಿಂದ ಬೆಂಗಳೂರಿನತ್ತ ಆಗಮಿಸುತ್ತಿದ್ದು ಇಂದು ಮಧ್ಯಾಹ್ನ ಅಂಬರೀಶ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದೆ.

ಈ ನಡುವೆ ಶ್ರುತಿ ಹರಿಹರನ್- ಅರ್ಜುನ್ ಸರ್ಜಾ ಪ್ರಕರಣದಲ್ಲಿ ಹೊಸ ತಿರುವೊಂದು ಕಾಣಿಸಿಕೊಂಡಿದ್ದು ಅನಾಮಧೇಯ ವ್ಯಕ್ತಿಯೊಬ್ಬ ರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರಿಗೆ ಕರೆ ಮಾಡಿ ಶ್ರುತಿ ವಿರುದ್ಧ ಆರೋಪ ಮುಚ್ಚಿ ಹಾಕಲು 1.5 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಶ್ರುತಿ ಹರಿಹರನ್ ಆಪ್ತ ಎಂದು ಹೇಳಿಕೊಳ್ಳುವ ವ್ಯಕ್ತಿ ಕರೆ ಮಾಡಿದ್ದಾರೆ ಎಂದು ಶಿವಾರ್ಜುನ್ ಖಾಸಗಿ ಟಿವಿ ವಾಹಿನಿಗೆ ತಿಳಿಸಿದ್ದಾರೆ.

ಆದರೆ ಇದೇ ವೇಳೆ ಶ್ರುತಿ ಈ ಬಗ್ಗೆ ಪ್ರತಿಕ್ರಯಿಸಿದ್ದು ಣಾನು ಯಾವ ದುಡ್ಡಿಗೆ ಬೇಡಿಕೆ ಇಟ್ಟಿಲ್ಲ, ನನ್ನ ಆಪ್ತರು ಯಾರಿಗೆ ಕರೆ ಮಾಡಿಲ್ಲ ಎಂದಿದ್ದಾರೆ.

Comments are closed.