ಕರಾವಳಿ

ನಾಡ ಪಡುಕೋಣೆ ಶಾಲೆ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಮಾಸ್ಟರ್ ನಿಧನ

Pinterest LinkedIn Tumblr

ಕುಂದಾಪುರ : ನಾಡ ಪಡುಕೋಣೆ ಅನುದಾನಿತ ಗ್ರೆಗರಿ ಪ್ರೌಢಶಾಲೆ ಮುಖ್ಯಶಿಕ್ಷಕ ಮರವಂತೆ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ನಿಕಟಪರ್ವೂ ಪ್ರಧಾನ ಕಾರ್‍ಯದರ್ಶಿ ಸುಬ್ರಹ್ಮಣ್ಯ ಮಾಸ್ಟರ್ ಎಂದೇ ಗುರುತಿಸಿಕೊಂಡ ಸುಬ್ರಹ್ಮಣ್ಯ ಪುರಾಣಿಕ (49) ಮಾಣಿಕೊಳಲು ಬುಧವಾರ ರಾತ್ರಿ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ತಂದೆ,ತಾಯಿ, ಪತ್ನಿ ಹೆಣ್ಣು ಹಾಗೂ ಗಂಡು ಮಕ್ಕಳ ಅಗಲಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ನಮನ :
ಪಡುಕೋಣೆ ಅನುದಾನಿತ ಗ್ರೆಗರಿ ಪ್ರೌಢಶಾಲೆ ಹಾಗೂ ಹಕ್ಲಾಡಿ ಕೊಳ್ಳೆಬೈಲು ಸೂರಪ್ಪ ಶೆಟ್ಟಿ ಸ್ಮಾರಕ ಪ್ರೌಢಶಾಲೆಯಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶಮಾಡಿಕೊಟ್ಟಿದ್ದು, ಸಾವಿರಾರು ನಾಗರಿಕರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕ ಅಂತಿಮ ದರ್ಶನ ಪಡೆದರು. ಸುಬ್ರಹ್ಮಣ್ಯ ಪುರಾಣಿಕ ಜನ ಮೆಚ್ಚಿದ ಶಿಕ್ಷಕರಾಗಿದ್ದರು. ನಮ್ಮ ಮೆಚ್ಚಿನ ಶಿಕ್ಷಕರ ಪಾರ್ಥೀವ ಶರೀಕಂಡು ಮಕ್ಕಳ ಗದ್ಗಿತರಾಗಿದ್ದು, ಇಡೀ ಶಾಲಾ ಪರಿಸರ ಶೋಕಾಚರಣೆಯಲ್ಲಿ ಮುಳಗಿತ್ತು.

Comments are closed.