ಮನೋರಂಜನೆ

ಮೀ ಟೂ ಆಂದೋಲನ ಭಾರತೀಯ ಚಿತ್ರರಂಗವನ್ನು ಶುದ್ಧೀಕರಿಸುವಷ್ಟು ಪ್ರಬಲ: ಎ ಆರ್‌ ರೆಹಮಾನ್‌

Pinterest LinkedIn Tumblr


ಮುಂಬಯಿ : ಭಾರತೀಯ ಚಿತ್ರರಂಗದಲ್ಲಿ ಪ್ರಕೃತ ಸಾಗುತ್ತಿರುವ ಮೀ ಟೂ ಆಂದೋಲನವು ಚಿತ್ರರಂಗವನ್ನು ಶುದ್ಧೀಕರಿಸುವಷ್ಟು ಪ್ರಬಲವಾಗಿದೆ ಎಂದು ನಾನು ತಿಳಿಯುತ್ತೇನೆ; ಅಂತೆಯೇ ಮಹಿಳೆಯರನ್ನು ಗೌರವಿಸುವ ಮೂಲಕ ಚಿತ್ರರಂಗವು ಪರಿಶುದ್ಧವಾಗಿ ಹೊರಹೊಮ್ಮುವುದೆಂಬ ವಿಶ್ವಾಸ ನನಗಿದೆ ಎಂದು ಖ್ಯಾತ ಚಿತ್ರ ಸಂಗೀತ ನಿರ್ದೇಶಕ ಎ ಆರ್‌ ರೆಹಮಾನ್‌ ಹೇಳಿದ್ದಾರೆ.

ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾಗಿರುವ 51ರ ಹರೆಯದ ರೆಹಮಾನ್‌ ಅವರು ನಿನ್ನೆ ಸೋಮವಾರ ರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಮೀ ಟೂ ಆಂದೋಲನದ ಬಗೆಗಿನ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಮಹಿಳೆಯರ ಸಹಿತ ಎಲ್ಲರಿಗೂ ಸುರಕ್ಷಿತ ಮತ್ತು ಗೌರವದ ಕೆಲಸದ ವಾತಾವಾರಣವನ್ನು ಚಿತ್ರರಂಗದಲ್ಲಿ ಸೃಷ್ಟಿಸುವುದೇ ನನ್ನ ಯಾವತ್ತಿನ ಗುರಿಯಾಗಿದೆ ಎಂದು ರೆಹಮಾನ್‌ ಹೇಳಿದರು.

Comments are closed.