ಮನೋರಂಜನೆ

ಅರ್ಜುನ್ ಸರ್ಜಾ ಮೇಲೆ ನನಗೆ ದ್ವೇಷವಿಲ್ಲ, ಅವರು ಕೊಟ್ಟ 10 ಲಕ್ಷ ವಾಪಸ್ ನೀಡಲು ನಾನು ರೆಡಿ: ನಟ ಚೇತನ್

Pinterest LinkedIn Tumblr

ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀ ಟೂ ವಿವಾದ ಸುದ್ದಿಯಾಗುತ್ತಿದ್ದು ನಟ ಚೇತನ್ ಹಣದ ಕಾರಣದಿಂದ ಶ್ರುತಿ ಹರಿಹರನ್ ಬೆನ್ನಿಗೆ ನಿಂತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ.

10 ಲಕ್ಷ ರುಪಾಯಿ ಹಣದ ವಿಚಾರವಾಗಿ ನಟ ಚೇತನ್ ಶ್ರುತಿ ಹರಿಹರನ್ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚೇತನ್, ಅರ್ಜುನ್ ಸರ್ಜಾ ಅವರ ಪ್ರೇಮ ಬರಹ ಚಿತ್ರದಲ್ಲಿ ನಾನು ಅಭಿನಯಿಸಬೇಕಿತ್ತು. ಈ ಚಿತ್ರಕ್ಕಾಗಿ ನಾನು 6 ತಿಂಗಳ ಕಾಲ ಅರ್ಜುನ್ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಇದೇ ವೇಳೆ ಫೋಟೋಶೂಟ್ ಹಾಗೂ ಚಿತ್ರೀಕರಣದ ಸ್ಥಳಗಳನ್ನೆಲ್ಲಾ ಸುತ್ತಾಡಿದ್ದೇವು.

ನಂತರ ನಾನು ಚಿತ್ರದಿಂದ ಹೊರಬಂದೆ. ನನಗೆ ಅರ್ಜುನ್ ಸರ್ಜಾ ಅವರು ಮುಂಗಡವಾಗಿ 10 ಲಕ್ಷ ರುಪಾಯಿ ನೀಡಿದ್ದರು. ಅದಕ್ಕಾಗಿ ನಾನು ನನ್ನ ಡೇಟ್ಸ್ ಅನ್ನು ನೀಡಿದ್ದೆ. ನಾನು ಚಿತ್ರದಿಂದ ಹೊರಬಂದ ಬಳಿಕ ಅರ್ಜುನ್ ಅವರು ನನ್ನ ಬಳಿ ನೇರವಾಗಿ ಹಣವನ್ನು ಕೇಳಿರಲಿಲ್ಲ. ಮುಂದಿನ ಪ್ರಾಜೆಕ್ಟ್ ನಲ್ಲಿ ನಾವಿಬ್ಬರು ಒಟ್ಟಾಗಿ ಕೆಲಸ ಮಾಡುತ್ತೇವೆ ಅಂದುಕೊಂಡಿದ್ದೆ. ಆದರೆ ಅವರಿಗೆ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಅವರು ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್ ನೀಡಲು ನಾನು ರೆಡಿಯಾಗಿದ್ದೇನೆ ಎಂದರು.

Comments are closed.