ರಾಷ್ಟ್ರೀಯ

ಪೇಟಿಎಂನ ಸ್ಥಾಪಕ ವಿಜಯ್ ಶೇಖರ್ ಶರ್ಮಾರಿಂದಲೇ 20 ಕೋಟಿ ಹಣ ದೋಚಲು ಯತ್ನಿಸಿದ ಸಂಸ್ಥೆಯ ಸೆಕ್ರೆಟರಿ ಸೇರಿ ಮೂವರು ಉದ್ಯೋಗಿಗಳ ಬಂಧನ !

Pinterest LinkedIn Tumblr

ಇ-ವಾಲೆಟ್ ದೈತ್ಯ ಪೇಟಿಎಂ ನ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಂದ 20 ಕೋಟಿ ಹಣ ಪೀಕಲು ಯತ್ನಿಸಿದ್ದ ಅರೋಪದ ಅಡಿ ಪೇಟಿಎಂ ನ 3 ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂಸ್ಥೆ ಸಂಗ್ರಹಿಸಿಟ್ಟಿದ್ದ ಖಾಸಗಿ ಮಾಹಿತಿಗಳನ್ನು ಕದ್ದು ಅದನ್ನು ಸೋರಿಕೆ ಮಾಡುವುದಾಗಿ ಪೇಟಿಎಂ ನ ಕಾರ್ಯದರ್ಶಿ ಸೇರಿದಂತೆ ಮೂವರು ಉದ್ಯೋಗಿಗಳು ಸಂಸ್ಥೆಯ ಸ್ಥಾಪಕ ವಿಜಯ್ ಶೇಖರ್ ಶರ್ಮಾಗೆ ಬೆದರಿಕೆ ಹಾಕುತ್ತಿದ್ದರು ಎಂದು ಕಾರ್ಯಾಚರಣೆ ನಡೆಸಿರುವ ನೋಯ್ಡಾ ಪೊಲೀಸರು ಹೇಳಿದ್ದಾರೆ.

ಈ ಬೆದರಿಕೆ ಷಡ್ಯಂತ್ರದಲ್ಲಿ ವಿಜಯ್ ಶೇಖರ್ ಶರ್ಮಾ ಅವರ ಕಾರ್ಯದರ್ಶಿ ಆಕೆಯ ಪತಿ, ಸಂಸ್ಥೆಯ ಮತ್ತೋರ್ವ ಉದ್ಯೋಗಿ ದೇವೇಂದ್ರ ಕುಮಾರ್ ಹಾಗೂ ಸಂಸ್ಥೆಯ ಕೋಲ್ಕತ್ತಾ ವಿಭಾಗದ ಉದ್ಯೋಗಿಯಾಗಿರುವ ರೋಹಿತ್ ಚೋಮಲ್ ಎಂಬುವವರು ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಮಗೆ ಬೆದರಿಕೆ ಬರುತ್ತಿರುವುದರ ಬಗ್ಗೆ ವಿಜಯ್ ಶೇಖರ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.

Comments are closed.