ಮನೋರಂಜನೆ

ಬಹುನಿರೀಕ್ಷೆಯ ಬಿಗ್​ಬಾಸ್ ಸೀಸನ್-6 ಭಾನುವಾರದಿಂದ ಆರಂಭ

Pinterest LinkedIn Tumblr


ಬೆಂಗಳೂರು: ಬಹುನಿರೀಕ್ಷೆಯ ಬಿಗ್​ಬಾಸ್​ ಸೀಸನ್​ ಸಿಕ್ಸ್​ ಭಾನುವಾರದಿಂದ ಆರಂಭವಾಗಿದೆ. ಈ ಬಾರಿ ಬಿಗ್​ಬಾಸ್​ ಮನೆ ಪ್ರವೇಶಿಸುತ್ತಿರುವ ಸ್ಪರ್ಧಿಗಳನ್ನು ನೋಡಿದರೆ ವೀಕ್ಷಕರಿಗೆ ಒಂದು ಕ್ಷಣ ಅಚ್ಚರಿಯಾಗಬಹುದು. ಏಕೆಂದರೆ, ಆಯ್ಕೆಯಾಗಿರುವ ಸ್ಪರ್ಧಿಗಳಲ್ಲಿ ಸೆಲೆಬ್ರೆಟಿಗಳಿಗಿಂತ ಕಾಮನ್​ ಮ್ಯಾನ್​ಗಳ ಸಂಖ್ಯೆಯೇ ಹೆಚ್ಚಾಗಿದೆ.

ಖ್ಯಾತ ಹಿನ್ನೆಲೆ ಗಾಯಕ ನವೀನ್​ ಸಜ್ಜು, ಪೋಷಕ ನಟಿ ಜಯಶ್ರೀ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಅಂತರರಾಷ್ಟ್ರೀಯ ಖ್ಯಾತಿಯ ಬಾಡಿ ಬಿಲ್ಡರ್ ಜಿಮ್ ರವಿ, ಕ್ರಿಕೆಟರ್​ ರಕ್ಷಿತಾ ರೈ ಹಾಗೂ ರ್ಯಾಪಿಡ್ ರಶ್ಮಿ, ನಟಿ ಗದಗದ ಸೋನು ಪಾಟೀಲ್, ಆ್ಯಂಡ್ರ್ಯೂ, ತೃತೀಯ ಲಿಂಗಿ ಆ್ಯಡಂ ಪಾಷಾ, ರೆಡಿಯೋ ಜಾಕಿ ಎಂ.ಜೆ.ರಾಕೇಶ್, ರಂಗಭೂಮಿ ನಟಿ ಅಕ್ಷತಾ ಪಾಂಡವಪುರ, ಕವಿತಾ ಗೌಡ, ನಟಿ ರೀಮಾ, ಸ್ನೇಹಾ ಆಚಾರ್ಯ, ರೈತ ಶಶಿಕುಮಾರ್, ಬಸ್​ ಕಂಡಕ್ಟರ್ ಆನಂದ್ ಮಾಲಗತ್ತಿ​, ಕಿರುತೆರೆ ನಟಿ ನಯನಾ ಪುಟ್ಟಸ್ವಾಮಿ ಹಾಗೂ ಕಲಾವಿದ ಧನರಾಜ್​ ಇದ್ದಾರೆ.

ಈ ಸೀಸನ್​ನಲ್ಲಿ ವಿಶೇಷವೆಂದರೆ ಶೋನಲ್ಲಿ 18 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇವರಲ್ಲಿ ಹಲವು ಮಂದಿ ಯಾರಿಗೂ ತಿಳಿಯದ ಸಾಮಾನ್ಯ ಜನರೇ ಇದ್ದಾರೆ. ಇನ್ನು ಕೆಲವು ಮಂದಿ ಸಣ್ಣಪುಟ್ಟ ಪಾತ್ರಗಳಲ್ಲಿ ತೆರೆ ಮೇಲೆ ಪಾತ್ರ ನಿರ್ವಹಿಸಿದ ನಟಿಯರು ಇದ್ದಾರೆ. ಇನ್ನು ಬೆರಳೆಣಿಕೆಯಷ್ಟು ಮಾತ್ರ ಸೆಲೆಬ್ರೆಟಿಗಳು ಇದ್ದಾರೆ. ಈ ಬಾರಿ 9 ಜನ ಮಹಿಳೆಯರು, 8 ಜನ ಪುರುಷ ಸ್ಪರ್ಧಿಗಳಿದ್ದು, ಒಬ್ಬ ತೃತೀಯ ಲಿಂಗಿ (ಆ್ಯಡಂ) ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ಕನ್ನಡ ಬಿಗ್​ಬಾಸ್​​ನಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಸ್ಪರ್ಧಿಯಾಗಿದ್ದಾರೆ. ಬಿಗ್​ಬಾಸ್​ 6 ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದಕ್ಕೆ ನೂರು ದಿನ ಕಾಯಬೇಕಿದೆ.

Comments are closed.