ರಾಷ್ಟ್ರೀಯ

ದೆಹಲಿಯಲ್ಲಿ ಇಂದು ವ್ಯಾಟ್​ ಕಡಿತಗೊಳಿಸಲು ಆಗ್ರಹಿಸಿ ಪೆಟ್ರೋಲ್​ ಪೂರೈಕೆ ಸ್ಥಗಿತ

Pinterest LinkedIn Tumblr


ನವದೆಹಲಿ: ಪೆಟ್ರೋಲ್​ ಮೇಲಿನ ಸುಂಕವನ್ನು ಕಡಿತಗೊಳಿಸಲು ದೆಹಲಿ ಸರ್ಕಾರ ಒಪ್ಪದಿರುವ ಹಿನ್ನೆಲೆಯಲ್ಲಿ ದೆಹಲಿಯ ಸಿಎನ್​ಜಿ ವಿತರಕರ ಜೊತೆ 400ಕ್ಕೂ ಹೆಚ್ಚು ಪೆಟ್ರೋಲ್​ ಬಂಕ್​ ಮಾಲೀಕರು ನಾಳೆ ಪ್ರತಿಭಟನೆ ನಡೆಸಲಿದ್ದಾರೆ.

ಪೆಟ್ರೋಲ್​ ಬಂಕ್​ಗಳ ಮಾಲೀಕರ ಪ್ರತಿಭಟನೆ ಹಿನ್ನೆಲೆಯಲ್ಲಿ ನಾಳೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್​ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ದೆಹಲಿ ಪೆಟ್ರೋಲ್​ ವಿತರಕರ ಸಂಘ ತಿಳಿಸಿದೆ. ದೆಹಲಿಯಲ್ಲಿ ಸಿಎನ್​ಜಿ ಸ್ಟೇಷನ್​ ಜೊತೆ ಲಿಂಕ್​ ಆಗಿರುವ 400ಕ್ಕೂ ಅಧಿಕ ಪೆಟ್ರೋಲ್​ ಬಂಕ್​ಗಳಿವೆ. ಅವೆಲ್ಲವೂ ನಾಳೆ ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಮುಚ್ಚಲ್ಪಟ್ಟಿರುತ್ತವೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮತತ್ಉ ಡೀಸೆಲ್​ ಬೆಲೆಯನ್ನು 2.50 ರೂ. ಕಡಿಮೆಗೊಳಿಸಿತ್ತು. ಹಾಗೇ, ರಾಜ್ಯ ಸರ್ಕಾರ ಕೂಡ 2.50 ರೂ. ಸುಂಕ ಕಡಿತಗೊಳಿಸಿದರೆ ಒಟ್ಟಾರೆ 5 ರೂ. ಬೆಲೆ ಕಡಿಮೆಯಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಸುಂಕ ಕಡಿಮೆ ಮಾಡುವಂತೆ ಮನವಿ ಮಾಡಿತ್ತು. ಆದರೆ, ದೆಹಲಿ ಸರ್ಕಾರ ಇದಕ್ಕೆ ಸ್ಪಂದಿಸದೆ ಸುಂಕವನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಹೀಗಾಗಿ, ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪೆಟ್ರೋಲ್​ ವಿತರಕರ ಸಂಘದ ಅಧ್ಯಕ್ಷ ನಿಶ್ಚಲ್​ ಸಿಂಘಾನಿಯಾ ಹೇಳಿದ್ದಾರೆ.

Comments are closed.