ಮನೋರಂಜನೆ

ತನುಶ್ರೀ ದತ್ತ ಮಾಡಿರುವ ಲೈಂಗಿಕ ಕಿರುಕುಳ ಆರೋಪ: ಹೌಸ್‌ಫುಲ್‌-4ನಿಂದ ಹಿಂದೆ ಸರಿದ ನಾನಾ ಪಾಟೇಕರ್?

Pinterest LinkedIn Tumblr


ಮುಂಬಯಿ: ಬಾಲಿವುಡ್‌ನ ಹೌಸ್‌ಫುಲ್‌-4 ಚಿತ್ರದಿಂದ ಹಿರಿಯ ನಟ ನಾನಾ ಪಾಟೇಕರ್‌ ಹಿಂದೆ ಸರಿದಿದ್ದಾರೆ. ಆದರೆ ಚಿತ್ರ ತಂಡ ಮಾತ್ರ ನಾನಾ ಪಾಟೇಕರ್‌ ಜತೆಗೆ ಚಿತ್ರೀಕರಿಸಲಾದ ದೃಶ್ಯಗಳನ್ನು ಕೈಬಿಡುವ ಲಕ್ಷಣ ಇಲ್ಲ.

ಮುಖ್ಯ ತಾರಾಗಣದಲ್ಲಿದ್ದ ನಾನಾ ಪಾಟೇಕರ್‌, ತಮ್ಮ ವಿರುದ್ಧ ತನುಶ್ರೀ ದತ್ತ ಮಾಡಿರುವ ಲೈಂಗಿಕ ಕಿರುಕುಳದ ಆರೋಪದ ಬಳಿಕ ಚಿತ್ರದಿಂದ ಹೊರ ಬಂದಿದ್ದರು. ಮುಖ್ಯ ಪಾತ್ರಗಳಲ್ಲಿದ್ದ ನಾನಾ ಪಾಟೇಕರ್‌ ದೃಶ್ಯಗಳನ್ನು ಇನ್ನು ಬದಲಾವಣೆ ಮಾಡುವುದು ಅಸಾಧ್ಯವೆಂದು ಚಿತ್ರ ತಂಡ ಅಭಿಪ್ರಾಯಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಆ ದೃಶ್ಯಗಳನ್ನು ಯಥಾ ಸ್ಥಿತಿಯಲ್ಲೇ ಇಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಅಲ್ಲದೆ ಹೌಸ್‌ಫುಲ್‌-4ನಿಂದ ನಾನಾ ಪಾಟೇಕರ್ ಸಂಪೂರ್ಣವಾಗಿ ಹೊರ ಬಂದಿದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಉತ್ತರವೇ ಸಿಕ್ಕಿಲ್ಲ ಎಂದೂ ಹೇಳಲಾಗುತ್ತಿದೆ.

ಹೌಸ್‌ಫುಲ್‌ 4 ಚಿತ್ರತಂಡವು ಇತ್ತೀಚೆಗೆ ಜೈಪುರ್‌ ಸೇರಿದಂತೆ ಇನ್ನಿತರ ಭಾಗಗಳಲ್ಲಿ ನಾನಾ ಪಾಟೇಕರ್‌ ಅವರ ದೃಶ್ಯಗಳನ್ನು ಚಿತ್ರೀಕರಿಸಿತ್ತು. ಇನ್ನುಳಿದ ದೃಶ್ಯಗಳನ್ನು ಚಿತ್ರೀಕರಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಚಿತ್ರತಂಡ ಹೇಳಿದೆ.

ನಾನಾ ಪಾಟೇಕರ್‌ ಜಾಗಕ್ಕೆ ಜಾಕಿ ಶ್ರಾಫ್‌ ತರುವ ಯೋಚನೆಗಳು ಚಿತ್ರತಂಡಕ್ಕಿದೆ ಎನ್ನಲಾಗಿದೆ.

ಈ ನಡುವೆ ಚಿತ್ರದ ನಿರ್ದೇಶಕ ಸಾಜಿದ್‌ ಖಾನ್‌ ವಿರುದ್ಧವೂ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಹಿಂದೆ ಸರಿದಿದ್ದಾರೆ.

ದೇಶಾದ್ಯಂತ ಹಲವಾರು ಬಾಲಿವುಡ್‌ ಪ್ರತಿಭೆಗಳ ನಿದ್ದೆಗೆಡಿಸಿರುವ ಮೀ ಟೂ ಅಭಿಯಾನ ಇದೀಗ ಚಿತ್ರ ನಿರ್ಮಾಣಕ್ಕೂ ಸಮಸ್ಯೆ ಮಾಡುತ್ತಿದೆ.

Comments are closed.