ರಾಷ್ಟ್ರೀಯ

#MeToo: ಎಮ್​.ಜೆ. ಅಕ್ಬರ್​ ಮಂತ್ರಿ ಸ್ಥಾನಕ್ಕೆ ರಾಜೀನಾಮೆ

Pinterest LinkedIn Tumblr


ನವದೆಹಲಿ: #MeToo ಅಭಿಯಾನದಲ್ಲಿ ಹಲವು ಮಹಿಳೆಯರಿಂದ ಬಿಜೆಪಿಯ ಎಮ್​.ಜೆ. ಅಕ್ಬರ್​​ ವಿರುದ್ಧ ಆರೋಪಗಳು ಕೇಳಿ ಬಂದಿತ್ತಾದರೂ, ಆರೋಪಗಳನ್ನು ಸಚಿವ ಅಲ್ಲಗಳೆದಿದ್ದರು. ದೂರು ನೀಡಿದ ಪತ್ರಕರ್ತೆಯರು ಮತ್ತು ಇತರ ಮಹಿಳೆಯರ ವಿರುದ್ಧ ಕಾನೂನು ಸಮರವನ್ನೂ ಸಾರಿದ್ದರು.

ಆದರೆ ಕಡೆಗೂ #MeToo ಬಿರುಗಾಳಿಗೆ ತಲೆ ಬಾಗಿಸಿರುವ ಎಮ್​.ಜೆ. ಅಕ್ಬರ್​ ರಾಜೀನಾಮೆ ನೀಡಿದ್ದಾರೆ. ಮೂರು ದಿನಗಳ ಹಿಂದೆ ಅಕ್ಬರ್​ ರಾಜೀನಾಮೆ ನೀಡಿದ್ದಾರೆ ಎಂಬ ಊಹಾಪೂಹಗಳು ಕೇಳಿ ಬಂದಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದ ಎಮ್​.ಜೆ. ಅಕ್ಬರ್​ ರಾಜೀನಾಮೆ ನೀಡುವುದಿಲ್ಲ ಎಂದಿದ್ದರು. ಆದರೆ ಇದೀಗ ಅಧಿಕೃತವಾಗಿ ರಾಜೀನಾಮೆ ನೀಡಿದ್ದು ನ್ಯೂಸ್​ 18ಗೆ ರಾಜೀನಾಮೆ ಪತ್ರದ ಪ್ರತಿ ಲಭ್ಯವಾಗಿದೆ.

ಎಮ್​.ಜೆ. ಅಕ್ಬರ್​ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Comments are closed.