ಮನೋರಂಜನೆ

ಬಲವಂತದಿಂದ ಚುಂಬನಕ್ಕೆ ಯತ್ನ: ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಕಾಟೆ ಶರ್ಮಾ ದೂರು ದಾಖಲು

Pinterest LinkedIn Tumblr

ಮುಂಬೈ : ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಕಿರುತೆರೆ ಕಲಾವಿದೆ ಹಾಗೂ ಮಾಡೆಲ್ ಕಾಟೆ ಶರ್ಮಾ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಟೆ ಶರ್ಮಾ, ತನ್ನನ್ನು ಬಲವಂತದಿಂದ ತಬ್ಬಿಕೊಳ್ಳಲು ಹಾಗೂ ಚುಂಬಿಸಲು ಸುಭಾಯ್ ಘಾಯ್ ಪ್ರಯತ್ನಿದ್ದರು ಎಂದು ಆರೋಪಿಸಿದರು.

ಆಗಸ್ಟ್ 6 ರಂದು ತನ್ನನ್ನು ಮನೆಗೆ ಕರೆದಿದ್ದ ಸುಭಾಷ್ ಘಾಯ್, ಮನೆಯಲ್ಲಿದ್ದ ಐದಾರು ಮಂದಿ ಮುಂದೆ ಸಂದೇಶ ಕಳುಹಿಸುವಂತೆ ಕೇಳಿದರು. ಇದರಿಂದ ಭೀತಿಗೊಂಡೆ ಆದರೂ, ಅವರ ಹಿರಿತನಕ್ಕೆ ಬೆಲೆ ಕೊಟ್ಟು, ಎರಡರಿಂದ ಮೂರು ನಿಮಿಷಗಳಲ್ಲಿ ಸಂದೇಶ ಕಳುಹಿಸಿದೆ. ನಂತರ ವಾಶ್ ರೂಮ್ ಗೆ ತೆರಳಿ ತನ್ನ ಕೈ ತೊಳೆದುಕೊಂಡಿದ್ದಾಗಿ ಹೇಳಿದರು.

ವಾಶ್ ರೂಮಿಗೆ ತನ್ನನ್ನು ಹಿಂಬಾಲಿಸಿಕೊಂಡ ಬಂದು ಏನೋ ಮಾತನಾಡುವುದು ಇದೆ ಎಂದು ಹೇಳಿದರು. ಆದಾಗ್ಯೂ, ಅವರು ತನ್ನನ್ನು ತಬ್ಬಿಕೊಂಡು ಚುಂಬಿಸಲು ಪ್ರಯತ್ನಿಸಿದರು, ಬಿಡುವಂತೆ ಬೇಡಿಕೊಂಡರೂ ಬಿಡದ ಖಳನಾಯಕ ನಿರ್ದೇಶಕರು, ಆ ರಾತ್ರಿ ಸಹಕರಿಸದೆ ಇದ್ದರೆ ಆಕೆಯೊಂದಿಗೆ ಊಟ ಮಾಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಶರ್ಮಾ ಆರೋಪಿಸಿದರು.

ವಾರದ ಆರಂಭದಲ್ಲಿ #MeToo ಅಭಿಯಾನದಲ್ಲಿ ನಿರ್ದೇಶಕ ಸುಭಾಷ್ ಘಾಯ್ ವಿರುದ್ಧ ಕಾಟೆ ಶರ್ಮಾ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಆದರೆ , ಈ ಆರೋಪವನ್ನು ಸುಭಾಷ್ ಘಾಯ್ ನಿರಾಕರಿಸಿದ್ದರು. ಸತ್ಯದಿಂದ ಕೂಡಿರದ ಇಂತಹ ಆರೋಪಗಳ ವಿರುದ್ಧ ಕೇಸ್ ಹಾಕುವುದಾಗಿ 73 ವರ್ಷದ ಸುಭಾಷ್ ಘಾಯ್ ಹೇಳಿಕೆ ನೀಡಿದ್ದರು.

Comments are closed.