ಮನೋರಂಜನೆ

ಆರೋಪ ಸಾಬೀತುಪಡಿಸದಿದ್ದಲ್ಲಿ ದೂರು ದಾಖಲಿಸುತ್ತೇನೆ : ನಿರ್ದೇಶಕ ಸುಭಾಷ್ ಘಾಯ್

Pinterest LinkedIn Tumblr


ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಮಿ ಟೂ ಅಭಿಯಾನದಡಿ ತಮ್ಮ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಬಾಲಿವುಡ್ ನ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ನಿರಾಕರಿಸಿದ್ದಾರೆ. ಅಲ್ಲದೆ ಈ ಆರೋಪದಿಂದ ತೀವ್ರ ಬೇಸರವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೃತಕ ಜಗತ್ತಿನ ಬಗ್ಗೆ ತೀವ್ರ ಬೇಸರವಾಗುತ್ತಿದೆ. ಆದರೆ ನನ್ನನ್ನು ಹತ್ತಿರದಿಂದ ಬಲ್ಲ ಜನರಿಗೆ ನನ್ನ ಕೃತಜ್ಞತೆಗಳು ಮತ್ತು ನಾನು ಮಹಿಳೆಯರನ್ನು ಎಷ್ಟು ಗೌರವಿಸುತ್ತೇನೆ ಎನ್ನುವುದು ಗೊತ್ತಿದೆ ಎನ್ನುತ್ತಾರೆ.
ಜೀವನದ ಭವಿಷ್ಯದಲ್ಲಿ ಒಳ್ಳೆ ಸಮಯ ಮತ್ತು ಕೆಟ್ಟ ಸಮಯ ಎರಡೂ ಬರುತ್ತದೆ. ಆದರೂ ಈ ಆರೋಪದಿಂದ ನನಗೆ ತುಂಬಾ ಬೇಸರವಾಗಿದೆ. ಈ ಕೃತ್ರಿಮ ಜಗತ್ತಿನಲ್ಲಿ ಬೇರೆ ಬೇರೆ ವಿಧಗಳಲ್ಲಿ ನನಗೆ ಪ್ರೀತಿ, ಗೌರವ ತೋರಿಸುವವರು ಇದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಹೇಳಿಕೆ ನೀಡಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದ ಸುಭಾಷ್ ಘಾಯ್, ಬೇರೆಯವರ ಮೇಲೆ ಆರೋಪ ಮಾಡುವುದು, ಹಿಂದಿನ ಏನಾದರೊಂದು ಘಟನೆ, ಕಥೆ ಹೇಳಿಕೊಂಡು ಮಾನಹರಣ ಮಾಡುವುದು ಫ್ಯಾಶನ್ ಆಗಿಬಿಟ್ಟಿದೆ. ಇದರಲ್ಲಿ ಸತ್ಯವಿದೆಯೇ ಅಥವಾ ಅರ್ಧ ಸತ್ಯವೇ ಎಂದು ನೋಡಲು ಕೂಡ ಹೋಗುವುದಿಲ್ಲ. ನಾನು ಇಂತಹ ಆರೋಪವನ್ನು ಕಟ್ಟುನಿಟ್ಟಾಗಿ, ದೃಢವಾಗಿ ನಿರಾಕರಿಸುತ್ತೇನೆ. ತಮ್ಮ ಜೀವನದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರನ್ನು ಯಾವತ್ತಿಗೂ ಗೌರವದಿಂದಲೇ ನೋಡಿದ್ದೇನೆ. ನನ್ನ ಮೇಲಿನ ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ, ಇಲ್ಲದಿದ್ದರೆ ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.
ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದ್ದಾಗ ಸುಭಾಷ್ ಘಾಯ್ ಅವರು ತಮಗೆ ಮತ್ತು ಬರಿಸುವ ಪದಾರ್ಥ ಸೇವಿಸಲು ನೀಡಿ ಹೊಟೇಲ್ ನಲ್ಲಿ ಅತ್ಯಾಚಾರವೆಸಗಿದ್ದರು ಎಂದು ನಿನ್ನೆ ಮಹಿಳೆಯೊಬ್ಬರು ಆರೋಪಿಸಿದ್ದರು.

Comments are closed.