ಮನೋರಂಜನೆ

ಬಾಲಿವುಡ್​ ನಟಿ ತನುಶ್ರೀ ದತ್ತಾ ದೂರು: ಹಿರಿಯ ನಟ ನಾನಾ ಪಾಟೇಕರ್​, ​ ಗಣೇಶ್​ ಆಚಾರ್ಯ ವಿರುದ್ಧ ಎಫ್​ಐಆರ್

Pinterest LinkedIn Tumblr

ಮುಂಬೈ: ಬಾಲಿವುಡ್​ ನಟಿ ತನುಶ್ರೀ ದತ್ತಾ ಅವರು ನೀಡಿದ ದೂರಿನ ಆಧಾರದ ಮೇಲೆ ಹಿರಿಯ ನಟ ನಾನಾ ಪಾಟೇಕರ್​ ಮತ್ತು ಕೊರಿಯೋಗ್ರಾಫರ್​ ಗಣೇಶ್​ ಆಚಾರ್ಯ ಸೇರಿದಂತೆ ಹಲವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

2008ರಲ್ಲಿ ‘ಹಾರ್ನ್​​ ಓಕೆ ಪ್ಲೀಸ್​ ‘ ಚಿತ್ರದ ಶೂಟಿಂಗ್​ ವೇಳೆ ನಾನಾ ಪಾಟೇಕರ್​ ಮತ್ತು ಚಿತ್ರದ ನಿರ್ದೇಶಕ ರಾಕೇಶ್​ ಸಾರಂಗ್​, ನಿರ್ಮಾಪಕ ಸಮ್ಮಿ ಸಿದ್ದಿಕಿ ಹಾಗೂ ಗಣೇಶ್​ ಆಚಾರ್ಯ ಅವರು ಅನುಚಿತವಾಗಿ ವರ್ತಿಸಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಗಳ ವಿರುದ್ಧ 2 ಪುಟಗಳ ಲಿಖಿತ ದೂರು ನೀಡಿದ್ದರು.

ಇವರ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್​ 354 ಮತ್ತು 509ರ ಪ್ರಕಾರ ಮುಂಬೈನ ಓಶಿವಾರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ಈ ಪ್ರಕರಣದ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಮನೋಜ್​ ಕುಮಾರ್​ ಶರ್ಮಾ ತಿಳಿಸಿದ್ದಾರೆ.

ತನುಶ್ರೀ ದತ್ತಾ ಅವರ ವಕೀಲರು ಬುಧವಾರ ಮುಂಬೈ ಪೊಲೀಸ್​ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ತಮ್ಮ ಆರೋಪಕ್ಕೆ ಪೂರಕವಾದ 40 ಪುಟಗಳ ದಾಖಲೆಯನ್ನು ಸಲ್ಲಿಸಿದ್ದರು.

Comments are closed.