ಮನೋರಂಜನೆ

ಸುದೀಪ್, ಆ್ಯಮಿ ಜಾಕ್ಸನ್ ರ ದಿ ವಿಲನ್ ಚಿತ್ರದ ರೊಮ್ಯಾಂಟಿಕ್ ಹಾಡಿನ ಝಲಕ್ ಬಿಡುಗಡೆ

Pinterest LinkedIn Tumblr


ಬೆಂಗಳೂರು: ದಿ ವಿಲನ್ ಕರುನಾಡಿನ ಜನತೆ ಕಾಯುತ್ತಿರುವ ಮಲ್ಟಿ ಸ್ಟಾರ್ ಸಿನಿಮಾ. ಸಿನಿಮಾ ಅಕ್ಟೋಬರ್ 18ಕ್ಕೆ ರಿಲೀಸ್ ಆಗಲಿದ್ದು, ಚಿತ್ರತಂಡ ಸಿನಿಮಾದ ಮೇಕಿಂಗ್ ಮತ್ತು ಹಾಡಿನ ತುಣುಖೂಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದೆ. ಈಗ ಅಭಿನಯ ಚಕ್ರವರ್ತಿ ಸುದೀಪ್, ಬ್ರಿಟನ್ ಸುಂದರಿ ಆ್ಯಮಿ ಜಾಕ್ಸನ್ ಕಾಂಬೀನೇಷನ್ ‘ಹೇಳಲ್ಲ.. ನಾ, ಹೇಳಲ್ಲ’ ಹಾಡಿನ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೇವಲ 30 ಸೆಕೆಂಡ್‍ನ ಈ ವಿಡಿಯೋದಲ್ಲಿ ಮನೆಯೊಂದಕ್ಕೆ ಬಣ್ಣ ಹಚ್ಚುತ್ತಿದ್ದು, ಸುದೀಪ್ ಮತ್ತು ಆ್ಯಮಿ ರೊಮ್ಯಾಂಟಿಕ್ ಆಗಿ ಮಿಂಚಿದ್ದಾರೆ. ಸುದೀಪ್ ಬಿಳಿ ಮತ್ತು ನೀಲಿ ಬಣ್ಣದ ಕುರ್ತಾ ಧರಿಸಿ, ತಲೆಗೆ ಟ್ರೆಂಡಿಂಗ್ ಬಟ್ಟೆ ಕಟ್ಟಿದ್ದರೆ, ಇತ್ತ ಆ್ಯಮಿ ಸೀರೆ, ಲಂಗ-ದವಣಿಯಲ್ಲಿ ಕುಣಿದಿದ್ದಾರೆ. ದಿ ವಿಲನ್ ಸಿನಿಮಾದ ಟ್ರೇಲರ್, ಹಾಡಿನ ಲಿರಿಕ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚನ್ನು ಹರಿಸಿವೆ.

ಮಂಗಳವಾರ ಬಿಡುಗಡೆಯಾದ ದಿ ವಿಲನ್ ಹಾಡಿನ ಅಲ್ಬಂ ಟ್ರೆಂಡಿಂಗ್ 2 ರಲ್ಲಿದೆ. ಬಿಡುಗಡೆಯಾದ ಒಂದೇ ದಿನಕ್ಕೆ 8.9 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್ ಮೊದಲ ಬಾರಿಗೆ ಅಭಿನಯಿಸಿದ್ದು, ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅರ್ಜುನ್ಯ ಸಂಗೀತ ನೀಡಿದ್ದು, ಯುಟ್ಯೂಬ್‍ನಲ್ಲಿ ಸಂಚಲನ ಹುಟ್ಟುಹಾಕಿವೆ. ಚಿತ್ರ ಇದೇ ತಿಂಗಳು ಅಕ್ಟೋಬರ್ 18ರಂದು ತೆರೆಕಾಣಲಿದೆ.

Comments are closed.