ಮನೋರಂಜನೆ

ಬಾಲಿವುಡ್ ನಟಿ ಪ್ರೀತಿ ಜಿಂಟಾ , ಉದ್ಯಮಿ ನೆಸ್ ವಾಡಿಯಾ ಲೈಂಗಿಕ ಕಿರುಕುಳ ಪ್ರಕರಣ ಮುಂಬೈ ಹೈಕೋರ್ಟ್ ನಿಂದ ವಜಾ

Pinterest LinkedIn Tumblr


ಮುಂಬೈ: ಖ್ಯಾತ ಉದ್ಯಮಿ ನೆಸ್ ವಾಡಿಯಾ ವಿರುದ್ದ ನಟಿ ಪ್ರೀತಿ ಜಿಂಟಾ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ವಜಾಗೊಳಿಸಿ ಮುಂಬೈ ಹೈಕೋರ್ಟ್ ಆದೇಶ ನೀಡಿದೆ ಎಂದು ಎಎನ್ಐ ವರದಿ ಮಾಡಿದೆ.

ಪ್ರಕರಣ ಮುಗಿಸುವಂತೆ ಎರಡು ದಿನಗಳ ಹಿಂದೆಯಷ್ಟೆ ನಟಿ ಪ್ರೀತಿ ಜಿಂಟಾ ಸಲಹೆ ನೀಡಿದ್ದರು ಇಂದು ಈ ತೀರ್ಪು ಪ್ರಕಟವಾಗಿದೆ.

ಉದ್ಯಮಿ ನೆಸ್ ವಾಡಿಯಾ ಕ್ಷಮಾಪಣೆ ಕೇಳಲು ಮುಂದಾದರೆ ಪ್ರೀತಿ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಪ್ರೀತಿ ಪರ ವಕೀಲರು ತಿಳಿಸಿದ್ದರು. ಆದರೆ ನೆಸ್ ವಾಡಿಯಾ ಕ್ಷಮೆ ಕೇಳಲು ತಯಾರಿರಲಿಲ್ಲ.

ನೆಸ್ ವಾಡಿಯಾ ಅರ್ಜಿಯನ್ನು ಆಲಿಸಿದ ನ್ಯಾಯಾಲಯ ಇಬ್ಬರು ಈ ಪ್ರಕರಣವನ್ನು ನ್ಯಾಯಾಲಯದಿಂದ ಹೊರಗೆ ಇತ್ಯರ್ಥ ಮಾಡಿಕೊಳ್ಳುವಂತೆ ಸಲಹೆ ಮಾಡಿತ್ತು.

2014ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ವಾಂಖೇಡೆ ಕ್ರೀಡಾಂಗಣದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರೀತಿ ಆರೋಪಿಸಿದ್ದರು. ನೆಸ್ ವಾಡಿಯಾ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಸಹ ಮಾಲೀಕ ಕೂಡ ಆಗಿದ್ದಾರೆ.

ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ತಮ್ಮ ತಂಡ ಸಿಬ್ಬಂದಿಗಳ ವಿರುದ್ಧ ನೆಸ್ ವಾಡಿಯಾ ಕೀಳಾಗಿ ಬಾಯ್ದಿದ್ದರು. ಅಲ್ಲದೇ ನನ್ನನ್ನು ಕೈ ಹಿಡಿದು ಎಳೆದಾಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಪ್ರೀತಿ ಆರೋಪಿಸಿದರು.

2014ರಲ್ಲಿ ಜೂನ್ 13ರಂದು ಪ್ರೀತಿ ನೆಸ್ ವಾಡಿಯಾ ವಿರುದ್ಧ ಸೆಕ್ಷನ್ 354, 504, 506, 509 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು, ಈ ವರ್ಷದ ಫೆಬ್ರವರಿಯಲ್ಲಿ ನೆಸ್​ ವಾಡಿಯಾ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

Comments are closed.