ಮನೋರಂಜನೆ

ಮೊಬೈಲ್ ಪಾಸ್‍ವರ್ಡ್ ನಿಂದಾಗಿ ಬಾಲಿವುಡ್ ಹಾಟ್ ಕಪಲ್ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಬ್ರೇಕಪ್

Pinterest LinkedIn Tumblr


ಮುಂಬೈ: ಮೂರು ವರ್ಷಗಳಿಂದ ಲವ್ ನಲ್ಲಿದ್ದ ಬಾಲಿವುಡ್ ಹಾಟ್ ಕಪಲ್ ಟೈಗರ್ ಶ್ರಾಫ್ ಮತ್ತು ದಿಶಾ ಪಟಾಣಿ ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎಂಬ ಸುದ್ದಿಯೊಂದು ಸಿನಿ ಗಲ್ಲಿಯಲ್ಲಿ ಹರಿದಾಡುತ್ತಿದೆ. ಟೈಗರ್ ಶ್ರಾಫ್ ದಿಢೀರ್ ಅಂತಾ ತಮ್ಮ ಮೊಬೈಲ್ ಪಾಸ್ ವರ್ಡ್ ಬದಲಾಯಿಸಿದ್ದರಿಂದ ದಿಶಾ ಕೋಪಗೊಂಡು ಗೆಳೆಯನಿಂದ ದೂರ ಉಳಿದುಕೊಂಡಿದ್ದಾರೆ ಎಂದು ಹಿಂದಿ ವೆಬ್‍ಸೈಟ್ ಪ್ರಕಟಿಸಿದೆ.

ಮೂರು ವರ್ಷಗಳಿಂದ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಕಳೆದರೆಡು ತಿಂಗಳನಿಂದ ಎಲ್ಲಿಯೂ ಕಾಣುತ್ತಿಲ್ಲ. ಟೈಗರ್ ಮತ್ತು ದಿಶಾ ಇಬ್ಬರು ಭಾಗಿ-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಬ್ಬರ ಒಡನಾಟ, ಬಾಂಧವ್ಯ ಎಲ್ಲವೂ ತಾವು ಪ್ರೀತಿಯಲ್ಲಿದಿದ್ದನ್ನು ತೋರಿಸುತ್ತಿತ್ತು. ಒಂದು ಮೂಲಗಳ ಪ್ರಕಾರ ಇಬ್ಬರ ಮದುವೆಗೂ ಎರಡೂ ಕುಟುಂಬಸ್ಥರು ಒಪ್ಪಿಗೆಯನ್ನು ಸೂಚಿಸಿದ್ದರು. ಇತ್ತೀಚೆಗೆ ಟೈಗರ್ ಸ್ವತಃ ತಾವೇ ದಿಶಾರಿಂದ ದೂರ ಉಳಿಯುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಯಾಕೆ ಈ ದೂರ?
ಕರಣ್ ಜೋಹರ್ ನಿರ್ಮಾಣದ ‘ಸ್ಟೂಡೆಂಟ್ ಆಫ್ ದಿ ಇಯರ್-2’ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಈ ಚಿತ್ರದಲ್ಲಿ ಟೈಗರ್ ಗೆ ಜೊತೆಯಾಗಿ ತಾರಾ ಸುತಾರಿಯಾ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಟೈಗರ್ ಮತ್ತು ತಾರಾ ಒಬ್ಬರಿಗೊಬ್ಬರು ಹತ್ತಿರ ಆಗುತ್ತಿದ್ದಾರೆ ಎಂಬ ಸುದ್ದಿ ಸಹ ಬಾಲಿವುಡ್ ಸುದ್ದಿ ಅಂಗಳದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ಟೈಗರ್ ಸಹ ದಿಶಾರಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಮೊಬೈಲ್ ಪಾಸ್‍ವರ್ಡ್ ಬದಲಿಸಿ ಪ್ರೈವೇಸಿ ಕಾಪಾಡುತ್ತಿದ್ದಾರಂತೆ.

ಟೈಗರ್ ಮುನ್ನಾ ಮೈಕಲ್ ಸಿನಿಮಾದ ವೇಳೆಯೂ ನಿಧಿ ಅಗರವಾಲ್ ಜೊತೆ ಅತ್ಯಂತ ಸಲುಗೆಯಿಂದ ನಡೆದುಕೊಳ್ಳುತ್ತಿದ್ದನ್ನು ಕಂಡಿದ್ದ ದಿಶಾ ಗೆಳೆಯನ ಮೇಲೊಂದು ಕಣ್ಣಿಟ್ಟಿದ್ದರು. ಈ ಬಾರಿ ಮೊಬೈಲ್ ಪಾಸ್‍ವರ್ಡ್ ಬದಲಿಸಿದ ಕೂಡಲೇ ದಿಶಾ ಸಂಶಯ ಮತ್ತಷ್ಟು ಬಲವಾಗಿದೆ. ಕಳೆದ ಒಂದೆರಡು ತಿಂಗಳನಿಂದ ಇಬ್ಬರ ನಡುವಿನ ಮುನಿಸು ಇಂದು ಹೊರ ಬಿದ್ದಿದೆ. 2018ರ ಹೊಸ ವರ್ಷ ಆಚರಣೆಗಾಗಿ ದಿಶಾ ಮತ್ತು ಟೈಗರ್ ಮಾಲ್ಡೀವ್ಸ್ ಗೆ ತೆರಳಿದ್ದರು. ಮಾಲ್ವೀವ್ಸ್ ನಲ್ಲಿ ಟೈಗರ್ ಟಾಪ್ ಲೆಸ್ ಆಗಿರೋ ಫೋಟೋ ಮತ್ತು ದಿಶಾರ ಬಿಕಿನಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

Comments are closed.