ರಾಷ್ಟ್ರೀಯ

ವಿಮಾನ ನಿಲ್ದಾಣದಲ್ಲಿ ಐಡಿ ಕಾರ್ಡೇ ಬೇಡ!

Pinterest LinkedIn Tumblr

airport
ನವದೆಹಲಿ: ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ನಿಮ್ಮ ಐಡಿ ಕಾರ್ಡ್​ ತೋರಿಸಲೇಬೇಕು ಎಂಬ ನಿಯಮವೇನಿಲ್ಲ. ಯಾಕೆ ಅಂತೀರಾ? ನಿಮ್ಮ ಮುಖವೇ ನಿಮ್ಮ ಐಡಿ ಕಾರ್ಡ್​ ಆಗಿ ರೂಪುಗೊಳ್ಳಲಿದೆ. ಈ ಡಿಜಿ ಯಾತ್ರಾ ಎಂಬ ಯೋಜನೆಯ ಮೂಲಕ ಈ ತಂತ್ರಜ್ಞಾನದ ಅಳವಡಿಕೆಗೆ ಬೆಂಗಳೂರು ಮತ್ತು ಹೈದರಾಬಾದ್​ ವಿಮಾನ ನಿಲ್ದಾಣಗಳು ಸಜ್ಜಾಗಿವೆ. ಮುಂದಿನ ವರ್ಷಾಂತ್ಯದ ವೇಳೆಗೆ ಯೋಜನೆ ಜಾರಿಗೆ ಬರಲಿದೆ.

ಹೌದು, ನಮ್ಮ ದೇಶದಲ್ಲಿ ಇಂಥದ್ದೊಂದು ಹೊಸ ತಂತ್ರಜ್ಞಾನವನ್ನು ಅಳವಡಿಸಲು ಯೋಚಿಸಲಾಗಿದ್ದು, ಇದರಿಂದ ಸಮಯವೂ ಉಳಿತಾಯವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಡಿಜಿ ಯಾತ್ರಾ ಎಂಬ ಯೋಜನೆಯನ್ನು ಪರಿಚಯಿಸುತ್ತಿದೆ.

ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಈ ಬಗ್ಗೆ ಮಾಹಿತಿ ನೀಡಿದ್ದು, ಭವಿಷ್ಯದಲ್ಲಿ ಈ ಯೋಜನೆಯಿಂದ ಬಹಳ ಉಪಯೋಗವಾಗಲಿದ್ದು, ಬಯೋಮೆಟ್ರಿಕ್​ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಪ್ರಯಾಣಿಕರ ಆಯ್ಕೆಗೆ ಬಿಟ್ಟ ವಿಚಾರವಾಗಿರುತ್ತದೆ. ಈ ತಂತ್ರಜ್ಞಾನವನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದಿದ್ದಾರೆ.

ಮುಂದಿನ ವರ್ಷ ಚಾಲನೆ:

ನಾಗರಿಕ ವಿಮಾನಯಾನ ಸಚಿವಾಲಯದ ಸೂಚನೆಯಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ಯೋಜನೆಯನ್ನು ಕೋಲ್ಕತ, ವಾರಣಾಸಿ, ಪುಣೆ, ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಮುಂದಿನ ವರ್ಷ ಏಪ್ರಿಲ್​ ವೇಳೆಗೆ ಆರಂಭಿಸಲು ಯೋಜನೆ ಹಾಕಿಕೊಂಡಿದೆ.

ಡಿಜಿ ಯಾತ್ರಾ ಯೋಜನೆಯಡಿ ಪ್ರತಿಯೊಬ್ಬ ಪ್ರಯಾಣಿಕರಿಗೂ ಒಂದೊಂದು ಪ್ರತ್ಯೇಕ ಐಡಿ ನೀಡಲಾಗುತ್ತದೆ. ಈ ಐಡಿಯಲ್ಲಿ ಹೆಸರು, ಇ-ಮೇಲ್​ ಐಡಿ, ಮೊಬೈಲ್​ ನಂಬರ್, ಆಧಾರ್​ ನಂಬರ್​​ ಮುಂತಾದ ವಿವರಗಳು ಇರುತ್ತವೆ. ಪ್ರಯಾಣಿಕರು ವಿಮಾನ ಪ್ರಯಾಣವನ್ನು ಬುಕ್​ ಮಾಡುವಾಗ ಈ ಐಡಿಯನ್ನು ನೀಡಬೇಕಾಗುತ್ತದೆ.

ಹೇಗೆ ಉಪಯೋಗವಾಗುತ್ತದೆ?:

ಪ್ರಯಾಣಕ್ಕೂ ಮುನ್ನ ಏರ್​ಲೈನ್​ ಪ್ರಯಾಣಿಕರ ಡಾಟಾ ಮತ್ತು ಐಡಿಯನ್ನು ಪ್ರಯಾಣಿಕರು ವಿಮಾನ ಹತ್ತುವ ನಿಲ್ದಾಣಕ್ಕೆ ಕಳುಹಿಸಲಾಗುತ್ತದೆ. ಇದು ಮೊದಲ ಬಾರಿ ವಿಮಾನದ ಪ್ರಯಾಣಕ್ಕೆ ಮಾತ್ರ ಅನ್ವಯವಾಗುತ್ತದೆ. ಒಮ್ಮೆ ಅವರ ದಾಖಲಾತಿಯ ಪರಿಶೀಲನೆ ಆದ ನಂತರ ಆ ವ್ಯಕ್ತಿಯ ಮುಖವನ್ನೇ ಐಡಿಯನ್ನಾಗಿ ಪರಿಗಣಿಸಲಾಗುತ್ತದೆ.

Comments are closed.