ಮನೋರಂಜನೆ

ಅರ್ಜುನ್‌ ಸರ್ಜಾಗೆ ಮಗಳಿಂದ ಗೋವು ಬರ್ತ್‌ಡೇ ಉಡುಗೊರೆ

Pinterest LinkedIn Tumblr


ಚೆನ್ನೈ: ಸಿನಿಮಾ ತಾರೆಯರು ಬರ್ತ್‌ ಡೇ ಗೆ ದುಬಾರಿ ಕಾರುಗಳು, ವಾಚ್‌ಗಳು, ಚಿನ್ನಾಭರಣಗಳನ್ನು ಗಿಫ್ಟ್ ನೀಡುವುದನ್ನು ಕೇಳಿರುತ್ತೇವೆ. ಆದರೆ ದಕ್ಷಿಣದ ಖ್ಯಾತ ನಟ ಅರ್ಜುನ್‌ ಸರ್ಜಾ ಅವರಿಗೆ ಪುತ್ರಿ ಐಶ್ವರ್ಯಾ ಸರ್ಜಾ ಅವರು ಬರ್ತ್‌ ಡೇ ಗಿಫ್ಟ್ ಆಗಿ ದೇಸಿ ತಳಿಯ ಗೋವೊಂದನ್ನು ನೀಡಿ ಸುದ್ದಿಯಾಗಿದ್ದಾರೆ.

ಅಗಸ್ಟ್‌ 15 ರಂದು ಅರ್ಜುನ್‌ ಸರ್ಜಾ ಅವರು ಬರ್ತ್‌ ಡೇ ಆಚರಿಸಿಕೊಂಡಿದ್ದು ಗುಜರಾತ್‌ನ ಗಿರ್‌ ತಳಿಯ ಸುಂದರ ಆಕಳೊಂದನ್ನು ಐಶ್ವರ್ಯಾ ಗಿಫ್ಟ್ ಆಗಿ ನೀಡಿದ್ದಾರೆ. ಹಸುವನ್ನು ಅರ್ಜುನ್‌ ಸರ್ಜಾ ಮನೆಯಲ್ಲಿ ಸಾಕಿ ಸಲಹುತ್ತಿದ್ದಾರೆ.

ಗೋ ಪ್ರೇಮವನ್ನು ಮೆರೆದ ಐಶ್ವರ್ಯಾ ಮತ್ತು ಅರ್ಜುನ್‌ ಸರ್ಜಾ ಅವರಿಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು,ಫೋಟೋಗಳು ಈಗ ವೈರಲ್‌ ಆಗಿವೆ.

Comments are closed.