ರಾಷ್ಟ್ರೀಯ

ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರದ ವಿಡಿಯೋ ಮಾಡಿದ ಕಾಮುಕರು

Pinterest LinkedIn Tumblr


ಪಟ್ನಾ: ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ. ಅದೇ ರೀತಿ ಗಂಗಾ ನದಿಯಲ್ಲಿ ಸ್ನಾನ ಮಾಡಲು ಇಳಿದ ಮಹಿಳೆ ಮೇಲೆ ಕಾಮುಕರು ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.

ನದಿಯಲ್ಲಿದ್ದ ಮಹಿಳೆಯನ್ನು ಇಬ್ಬರು ಕಾಮುಕರು ಎಳೆದು ತಂದು ಅತ್ಯಾಚಾರ ನಡೆಸಿದ್ದಾರೆ. ಈ ಘಟನೆಯನ್ನು ಚಿತ್ರೀಕರಣ ಮಾಡಿಕೊಳ್ಳಲಾಗಿದ್ದು, ವಾಟ್ಸಾಪ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಗಂಗೆಯ ಪವಿತ್ರತೆಯನ್ನು ಗಮನಿಸಿ ತನ್ನನ್ನು ಬಿಟ್ಟು ಬಿಡಿ ಎಂದು ಮಹಿಳೆ ಬೇಡಿಕೊಳ್ಳುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಪ್ರಕರಣದ ಬಗ್ಗೆ ಮಹಿಳೆ ಯಾವುದೇ ದೂರನ್ನು ಪೊಲೀಸರಿಗೆ ನೀಡಿಲ್ಲ. ಆದರೆ ವಿಡಿಯೋ ಗಮನಿಸಿದ ಪೊಲೀಸರು ಸ್ವಯಂ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ..

ಪ್ರಕರಣದ ಆರೋಪಿ ಮಹ್ತೊ ಚಾಲಕನಾಗಿದ್ದು, ಪಟ್ನಾದಿಂದ ಬರ್ಹಾಗೆ ಹೋಗುವಾಗ ಬಂಧಿಸಲಾಗಿದೆ. ಈತನಿಗೆ ಆಕರ್ಷಿತಗೊಂಡು ಅವನ ಜೊತೆ ಊರು ತೊರೆಯುತ್ತಿದ್ದ ಅಪ್ರಾಪ್ತೆಯನ್ನು ಈ ವೇಳೆ ರಕ್ಷಿಸಲಾಗಿದೆ. ಮತ್ತೊಬ್ಬ ಆರೋಪಿ ವಿಶಾಲ್​ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ

Comments are closed.