ಮನೋರಂಜನೆ

ನಟ ಧ್ರುವ ಸರ್ಜಾರ ಗಡ್ಡಧಾರಿ ಫೋಟೋ ವೈರಲ್

Pinterest LinkedIn Tumblr


ನಿರ್ಮಾಣ ಹಂತದಲ್ಲಿಯೇ ಕ್ರೇಝ್‌ ಸೃಷ್ಟಿ ಮಾಡುತ್ತಿರುವ ಪೊಗರು ಸಿನಮಾದಲ್ಲಿ ಧ್ರುವ ಸರ್ಜಾ ಗಡ್ಡಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಧ್ರುವ ಗಡ್ಡ ಮತ್ತು ಕೂದಲು ಬಿಟ್ಟಿರುವ ಫೋಟೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಫುಲ್‌ ಥ್ರಿಲ್‌ ಆಗಿದ್ದಾರೆ.

ನಂದಕಿಶೋರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಸಿನಿಮಾದಲ್ಲಿ ಧ್ರುವ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿ ಗಡ್ಡ ಬಿಟ್ಟಿರುವುದು ಒಂದು. ಕಳೆದ ಮೂರು ಚಿತ್ರಗಳಲ್ಲಿಯೂ ಧ್ರುವ ಮಾಸ್‌ ಹೀರೋ ಆಗಿ, ಹುಡುಗಿಯರು ಇಷ್ಟಪಡುವಂತ ಲುಕ್‌ನಲ್ಲಿದ್ದರು. ಈ ಸಿನಿಮಾದಲ್ಲಿ ಗಡ್ಡ ಬಿಟ್ಟು ರಗಡ್‌ ಲುಕ್‌ನಲ್ಲಿ ನಟಿಸುತ್ತಿದ್ದಾರೆ.

ಈಗ ಬಿಡುಗಡೆಯಾಗಿರುವ ಫೊಟೋದಲ್ಲಿ ಧ್ರುವಸರ್ಜಾ, ಗಡ್ಡಧಾರಿಯಾಗಿ, ಜೇಡರ ಬಲೆಯ ಸುತ್ತ ನಿಂತಿದ್ದಾರೆ. ಈ ಹಿಂದೆ ಪೊಗರು ಚಿತ್ರಕ್ಕಾಗಿ ಧ್ರುವ 14 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಈಗ ಮತ್ತೆ ತೂಕ ಹೆಚ್ಚು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಧ್ರುವ ಸರ್ಜಾ ಅವರ ನಾಲ್ಕನೇ ಸಿನಿಮಾದ ಮೇಲೆ ಎಲ್ಲರ ಗಮನ ಹೋಗುತ್ತಿದೆ.

Comments are closed.