ಮನೋರಂಜನೆ

ಜೈಲಿನಲ್ಲಿರುವ ನಟ ದುನಿಯಾ ವಿಜಯ್ ನೀಡಿದ ಪ್ರತಿ ದೂರಿನ ಆಧಾರದ ಮೇಲೆ ಮಾರುತಿ ಗೌಡ, ಪಾನಿಪೂರಿ ಕಿಟ್ಟಿ ವಿರುದ್ಧ ಎಫ್ ಐಆರ್ !

Pinterest LinkedIn Tumblr

ಬೆಂಗಳೂರು:ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದುನಿಯಾ ವಿಜಯ್ ನೀಡಿದ ಪ್ರತಿ ದೂರಿನ ಆಧಾರದ ಮೇಲೆ ಹೈಗ್ರೌಂಡ್ಸ್ ಪೊಲೀಸರು ಮಾರುತಿ ಗೌಡ ಹಾಗೂ ಪಾನಿಪೂರಿ ಕಿಟ್ಟಿ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

ಚಿತ್ರವೊಂದರಲ್ಲಿ ಅಭಿನಯಿಸಿರುವ ತನ್ನ ಮಗನನ್ನು ಮಾರುತಿಗೌಡ ನಿಂದಿಸಿದಲ್ಲದೇ, ತಂದೆ ಹಾಗೂ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಹೋದಾಗ ಪಾನಿಪೂರಿ ಕಿಟ್ಟಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವಿಜಯ್ ಶನಿವಾರ ತಡರಾತ್ರಿ ಪ್ರತಿ ದೂರು ದಾಖಲಿಸಿದ್ದರು.

ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಸೋಮವಾರ ಎಫ್ ಐಆರ್ ದಾಖಲಿಸಿದ್ದಾರೆ.

ಅಪರಾಧ ಮತ್ತಿತರ ಪ್ರಕರಣದಡಿಯಲ್ಲಿ ಮಾರುತಿಗೌಡ, ಪಾನಿಪೂರಿ ಕಿಟ್ಟಿ ಹಾಗೂ ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Comments are closed.