ಮನೋರಂಜನೆ

ಬಯಲು ರಂಗಮಂದಿರ ಕಾಮಗಾರಿ ವಿವಾದ : ನಟಿ ಭಾವನಾ ರಾಮಣ್ಣಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೋಟಿಸ್

Pinterest LinkedIn Tumblr

ಬೆಂಗಳೂರು: ಹೂವು ಪೌಂಢೇಷನ್ ಗೆ ನೀಡಿರುವ 60 ಲಕ್ಷ ರೂಪಾಯಿ ನಿಧಿ ಬಳಕೆ ಬಗ್ಗೆ ಮಾಹಿತಿ ನೀಡುವಂತೆ ನಟಿ ಭಾವನಾ ರಾಮಣ್ಣ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೋಟಿಸ್ ನೀಡಿದೆ.

ಸರ್ಕಾರಿ ಕಲಾ ಕಾಲೇಜ್ ಆವರಣದ ಬಳಿ ಬಯಲು ರಂಗಮಂದಿರ ನಿರ್ಮಾಣ ವಿವಾದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೋಟಿಸ್ ನೀಡಿದ್ದು, ಹೂವು ಪೌಂಢೇಷನ್ ಗೆ ನೀಡಿರುವ ಹಣದ ಸದ್ಬಳಕೆ ಕುರಿತಂತೆ ಸಮಗ್ರ ಮಾಹಿತಿ ನೀಡುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

ರಂಗಮಂದಿರ ನಿರ್ಮಾಣ ವಿವಾದಕ್ಕೊಳಪಟ್ಟ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಭಾವನಾ ರಾಮಣ್ಣ, ಹಿಂದಿನ ಸರ್ಕಾರ ಕಾಮಗಾರಿ ಮಂಜೂರು ಮಾಡಿದ್ದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 60 ಲಕ್ಷ ಬಿಡುಗಡೆಯಾಗಿತ್ತು ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಪರಿಗಣಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಭಾವನಾ ರಾಮಣ್ಣ ನಡೆಸುತ್ತಿರುವ ಟ್ರಸ್ಟಿಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ. ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಹಣ ಬಿಡುಗಡೆ ಮಾಡಲಾಗಿದೆಯೇ ಹೊರತು ಯಾವುದೇ ಕಟ್ಟಡ ಅಥವಾ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಈ ನೋಟಿಸ್ ನೀಡಲಾಗಿದೆ . ಒಂದು ವೇಳೆ ಆ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದರೆ , ಅದನ್ನು ವಾಪಾಸ್ ಪಡೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾವನಾ ರಾಮಣ್ಣ ಅವರಿಂದ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ. ಒಂದು ವೇಳೆ ಹಣ ದುರ್ಬಳಕೆಯಾಗಿರುವುದು ಕಂಡುಬಂದ್ದರೆ, ಬಿಡುಗಡೆಯಾಗಿರುವ ಹಣವನ್ನು ಮತ್ತೆ ವಾಪಾಸ್ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

Comments are closed.