
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಡಿ ಬಾಸ್ ಎಂದೇ ಖ್ಯಾತಿ ಪಡೆದಿರುವ ಸ್ಟಾರ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಫೇಸ್ಬುಕ್ನಲ್ಲಿ ಕಿಡಿಗೇಡಿಗಳು ಕಿರುಕುಳ ನೀಡಿರುವ ಘಟನೆ ನಡೆದಿದೆ.
ವಿಜಯಲಕ್ಷ್ಮಿ ಅವರ ಚಿತ್ರ ಹಾಗೂ ಅವರ ಕುಟುಂಬದ ಚಿತ್ರಗಳನ್ನು ಬಳಸಿಕೊಂಡು ಅವರ ಬಗ್ಗೆ ಕೀಳು ಮಟ್ಟದ ಅಶ್ಲೀಲ ಪದ ಬಳಕೆ ಮಾಡಲಾಗಿದೆ. ದರ್ಶನ್ ಜೊತೆಯಿರುವ ವಿಜಯಲಕ್ಷ್ಮೀ ಅವರ ಚಿತ್ರವನ್ನು ಬಳಸಿಕೊಂಡು ಅದಕ್ಕೆ ಆರೋಪಿ ತನ್ನ ಫೋಟೊ ಬಳಸಿಕೊಂಡು ಆಕೆ ತನ್ನ ಪತ್ನಿ ಎಂದು ಬರೆದುಕೊಂಡಿದ್ದಾನೆ.
ಅಷ್ಟೇ ಅಲ್ಲದೇ ವಿಜಯಲಕ್ಷ್ಮೀ ಅವರ ಹೆಸರಿನಲ್ಲಿ ನಕಲಿ ಖಾತೆ ತೆರದು ಅದನ್ನು ಅಸಲಿ ಖಾತೆ ಎಂಬಂತೆ ಬಿಂಬಿಸಿದ್ದಾನೆ. ಈ ಖಾತೆಯಲ್ಲಿ ಅವರ ಫೋಟೊ ಎಡಿಟ್ ಮಾಡಿ ಅವರ ಫೊಟೊಗೆ “ನನ್ನ ಹೆಂಡತಿ”ಎಂದು ಟ್ಯಾಗ್ ಮಾಡಿದ್ದಾನೆ. ಈ ಮೂಲಕ ಅವರ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾನೆ ಎಂದು ವಿಜಯಲಕ್ಷಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354(D), 354A(1)(iv), (505) (507) (420)ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಈ ಕುರಿತು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
Comments are closed.