ಮನೋರಂಜನೆ

“ಪತಿಬೇಕು.ಕಾಂ’ ಸೆ.7ಕ್ಕೆ ಬಿಡುಗಡೆ

Pinterest LinkedIn Tumblr


“ಪತಿಬೇಕು.ಕಾಂ’ ಚಿತ್ರದ ಟ್ರೇಲರ್‌ ಹಾಗೂ ಒಂದು ಹಾಡು ಈಗಾಗಲೇ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್‌ ಅನ್ನು ಸುದೀಪ್‌, ಪ್ರೇಮ್‌ ಹಾಗೂ ಆ್ಯಮಿ ಜಾಕ್ಸನ್‌ ಬಿಡುಗಡೆ ಮಾಡಿದರೆ, ಹಾಡೊಂದನ್ನು ಶಿವರಾಜಕುಮಾರ್‌ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟ್ರೇಲರ್‌ ಹಾಗೂ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಚಿತ್ರವನ್ನು ಕೂಡಾ ಜನ ಮೆಚ್ಚುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈಗಾಗಲೇ ಚಿತ್ರದ ಡೈಲಾಗ್‌ ಒಂದು ಡಬ್‌ಸ್ಮ್ಯಾಶ್‌ ಆಗಿಯೂ ಜನಪ್ರಿಯವಾಗಿರುವುದು ಕೂಡಾ ಚಿತ್ರತಂಡಕ್ಕೆ ಖುಷಿಕೊಟ್ಟಿದೆ.

ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದ್ದು, ಸೆಪ್ಟೆಂಬರ್‌ 7 ರಂದು ಚಿತ್ರವನ್ನು ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕಿದೆ. ಈ ಚಿತ್ರವನ್ನು ರಾಕೇಶ್‌ ನಿರ್ದೇಶಿಸುವ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಶೀತಲ್‌ ಶೆಟ್ಟಿ ಈ ಚಿತ್ರದ ನಾಯಕಿ. ಇಡೀ ಚಿತ್ರ ಅವರ ಸುತ್ತ ಸುತ್ತವೇ ಸುತ್ತುತ್ತದೆ. ಈಗಾಗಲೇ ಸೆನ್ಸಾರ್‌ ಆಗಿದ್ದು, “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ.

“ಪತಿಬೇಕು.ಕಾಂ’ ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸು ದಾಟಿದ ಹೆಣ್ಣಿಗೆ ಗಂಡು ಹುಡುಕೋದು ಎಷ್ಟು ಕಷ್ಟ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಹಾಗಂತ ಸಿನಿಮಾ ಸೀರಿಯಸ್‌ ಆಗಿ ಸಾಗುವುದಿಲ್ಲ. ತುಂಬಾ ಮಜವಾದ ಅಂಶಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ ರಾಕೇಶ್‌. ಈ ಚಿತ್ರದಲ್ಲಿ ಯಾವುದೇ ಡಬಲ್‌ ಮೀನಿಂಗ್‌ ಅಂಶಗಳಿಲ್ಲದೇ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವಂತೆ. ಚಿತ್ರವನ್ನು ಕುಮಾರ್‌ ವಿತರಣೆ ಮಾಡುತ್ತಿದ್ದಾರೆ.

Comments are closed.