ಮನೋರಂಜನೆ

ಝಾನ್ಸಿ ರಾಣಿ ಲಕ್ಷ್ಮೀಬಾಯಿಯಾದ ನಟಿ ಕಂಗನಾ ರಣಾವತ್‌

Pinterest LinkedIn Tumblr


ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನಾಧಾರಿತ ಚಿತ್ರ ಮಣಿಕರ್ಣಿಕ ಪೋಸ್ಟರ್‌ ಸ್ವಾತಂತ್ರ್ಯೋತ್ಸವದ ದಿನ ಬಿಡುಗಡೆಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಕುದುರೆ ಮೇಲೆ ಕುಳಿತ ಲಕ್ಷ್ಮೀಬಾಯಿ, ತನ್ನ ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡುತ್ತ ಮುನ್ನುಗ್ಗುತ್ತಿರುವ ಚಿತ್ರ, ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣವನ್ನು ಕಣ್ಮುಂದೆ ತರುವಂತಿದೆ. ನೋಡುಗರ ಎದೆಯಲ್ಲಿ ರಾಷ್ಟ್ರ ಪ್ರೇಮದ ಕಿಚ್ಚು ಹಚ್ಚುವಂತಿದೆ.

ನಟಿ ಕಂಗನಾ ರಣಾವತ್‌ ಸಾಕ್ಷಾತ್‌ ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತೆ ಅವತಾರವೆತ್ತಿದ್ದಾರೆ. ಶೀಘ್ರದಲ್ಲೇ ‘ಮಣಿಕರ್ಣಿಕ: ದಿ ಕ್ವೀನ್‌ ಆಫ್‌ ಝಾನ್ಸಿ’ ಹೆಸರಲ್ಲಿ ಬೆಳ್ಳಿ ತೆರೆ ಮೇಲೆ ಬರಲಿದ್ದು, ಈಗಾಗಲೇ ಸಿನಿಮಾದ ಹಲವಾರು ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ಮಣಿಕರ್ಣಿಕ ಚಿತ್ರ ಮುಂದಿನ ವರ್ಷ ಗಣರಾಜ್ಯೋತ್ಸವಕ್ಕೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅಕ್ಟೋಬರ್‌ 2, ಗಾಂಧಿ ಜಯಂತಿಯಂದು ಸಿನಿಮಾದ ಟೀಸರ್‌ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ನವೆಂಬರ್‌ 19, ರಾಣಿ ಲಕ್ಷ್ಮೀಬಾಯಿ ಜಯಂತಿಯಂದು ಚಿತ್ರದ ಟ್ರೈಲರ್‌ ಬಿಡುಗಡೆಯಾಗಲಿದೆ.

ಮಣಿಕರ್ಣಿಕ ಬಿಡುಗಡೆ ಸಂದರ್ಭದಲ್ಲೇ ಹೃತಿಕ್‌ ರೋಷನ್‌ ನಟನೆಯ ‘ಸೂಪರ್‌ 30’ ಬಿಡುಗಡೆಯಾಗುವ ಸಂಭವವಿದ್ದು, ಆನ್‌ಲೈನ್‌ನಲ್ಲಿನ ಸಮರಕ್ಕೆ ಸಾಕ್ಷಿಯಾಗಿದ್ದ ಜೋಡಿ ಬಾಕ್ಸ್‌ ಆಫೀಸ್‌ನಲ್ಲೂ ಸಮರಕ್ಕೆ ಸಜ್ಜಾದಂತಾಗಿದೆ.

Comments are closed.