
ಮುಂಬೈ: ಪಾಕಿಸ್ತಾನಿ ಯುವತಿಯ ಮಾತನ್ನು ಒಪ್ಪದ ಯುವಕನಿಗೆ ಮಾಜಿ ವಿಶ್ವ ಸುಂದರಿ ಸುಶ್ಮಿತ ಸೇನ್ ಸರ್ಪ್ರೈಸ್ ನೀಡಿದ್ದಾರೆ.
ಪಾಕಿಸ್ತಾನದ ಸೈನ್ ಎಂಬಾಕೆ ಅಮೃತಸರದ ಉದ್ಯಮಿಯಾಗಿರುವ ವರುಣ್ ಡಿಪಿ (ಡಿಸ್‍ಪ್ಲೈ ಪಿಚ್ಚರ್) ಬಗ್ಗೆ ಟ್ವೀಟ್ ಮಾಡಿದ್ದಳು. ಇಂದು ಯಾರೋ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ ಎಂದು ಸೈನ್, ವರುಣ್ ಡಿಪಿ ಬಗ್ಗೆ ಟ್ವೀಟ್ ಮಾಡಿದ್ದಳು.
ಈ ಟ್ವೀಟ್‍ಗೆ ವರುಣ್ ಪ್ರತಿಕ್ರಿಯಿಸಿ, ಧನ್ಯವಾದ ನೀವು ಹೇಳುತ್ತಿದ್ದೀರಾ ಎಂದರೆ ನಾನು ಒಪ್ಪಿಕೊಳ್ಳುತ್ತೇನೆ ಎಂದು ರೀ-ಟ್ವೀಟ್ ಮಾಡಿದ್ದರು. ಅದಕ್ಕೆ ಸೈನ್ ಅರೇ ನಿನಗೆ ನಂಬಿಕೆ ಇಲ್ಲ ಎಂದರೆ ಬೇರೆಯವರಿಗೆ ಕೇಳು ಎಂದು ಮತ್ತೆ ಟ್ವೀಟ್ ಮಾಡಿದ್ದಳು.
ನಂತರ ಸುಶ್ಮಿತಾ ಸೇನ್ ಹೇಳಿದ್ದರೆ, ಅದು ನಿಜವಾಗುತ್ತೆ ಆಗ ನಾನು ನಂಬುತ್ತೀನಿ ಎಂದು ಸೈನ್ ಟ್ವೀಟ್‍ಗೆ ರೀ-ಟ್ವೀಟ್ ಮಾಡಿದ್ದಾರೆ. ನಂತರ ಸೈನ್ ನಟಿ ಸುಶ್ಮಿತಾ ಸೇನ್‍ಗೆ ಟ್ಯಾಗ್ ಮಾಡಿ “ಡಿಪಿ ಚೆನ್ನಾಗಿ ಇದೆ ಎಂದು ನೀವೇ ಅವನಿಗೆ ಹೇಳಿ” ಎಂದು ಟ್ವೀಟ್ ಮಾಡಿದ್ದಾಳೆ.
ಸೈನ್ ಟ್ಯಾಗ್ ಮಾಡಿದ ಸ್ವಲ್ಪ ಸಮಯದಲ್ಲೇ ಸುಶ್ಮಿತಾ ಸೇನ್ “ಲವ್ ಯುವರ್ ಡಿಪಿ” ಎಂದು ವರುಣ್ ಡಿಪಿಗೆ ಟ್ವೀಟ್ ಮಾಡಿದ್ದಾರೆ. ಸುಶ್ಮಿತಾ ಪ್ರತಿಕ್ರಿಯೆ ನೋಡಿ ವರುಣ್ ಹಾಗೂ ಸೈನ್ ಖುಷಿಪಟ್ಟಿದ್ದಾರೆ. “ವಿಶ್ವ ಸುಂದರಿ ಲವ್ ಯುವರ್ ಡಿಪಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದು ನನಗೆ ಬಹಳ ಮಹತ್ವದ ಕ್ಷಣ ಹಾಗೂ ಖುಷಿಯ ವಿಷಯ” ಎಂದು ವರುಣ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
Comments are closed.