
ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಜೀವನಾಧಾರಿತ “ಕರೆಂಜಿತ್ ಕೌರ್ ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಹವಾ ಎಬ್ಬಿಸುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಇಟ್ಸ್ ಹಾಟ್’ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಅಲ್ಲದೇ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಹತ್ತು ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಾಡಿನ ಸಾಹಿತ್ಯವನ್ನು ಅನಂತ್ ಅವರು ಹಿಂದಿಯಲ್ಲಿ ರಚಿಸಿದ್ದರೆ ,ಇಂಗ್ಲಿಷ್ ಸಾಹಿತ್ಯವನ್ನು ತಾಲ್ಜ್ ಟ್ರೇ ಎವಾಲ್ದ್, ವಿದ್ಯಾಸೇತು ಮತ್ತು ರಾಹುಲ್ ಪೋಪಾವಾಲಾ ರಚಿಸಿದ್ದಾರೆ. ಸಂಗೀತ ಸಂಯೋಜನೆಯನ್ನು ತಾಲ್ಜ್ ಮಾಡಿದ್ದಾರೆ.
ಇನ್ನು “ಕರೆಂಜಿತ್ ಕೌರ್ ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಚಿತ್ರವು ಪ್ರಮುಖವಾಗಿ ಕೆನಡಾ ಮೂಲದಲ್ಲಿ ಮಧ್ಯಮವರ್ಗದ ಸಿಖ್ ಧರ್ಮಕ್ಕೆ ಸೇರಿದ ಹುಡುಗಿಯೊಬ್ಬಳು ಸನ್ನಿ ಲಿಯೋನ್ ಆಗಿ ನೀಲಿ ಚಿತ್ರ ತಾರೆಯಾಗಿ ಬದಲಾಗುವ ಸನ್ನಿವೇಶಗಳನ್ನು ಹಾಗೂ ಪ್ರಮುಖವಾಗಿ ತಮ್ಮ ಕೆರಿಯರ್ ನಲ್ಲಿ ಎದುರಿಸಿದ ಕಷ್ಟಕರ ಸಂಗತಿಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
Comments are closed.