ಮನೋರಂಜನೆ

ಕನ್ನಡಕ್ಕೆ ಅಡಿಯಿಡುತ್ತಿರುವ ಕಾಜಲ್ ಅಗರವಾಲ್?

Pinterest LinkedIn Tumblr

5
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರವೂ ಒಂದು. ಈ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು ಒಂದೇ ಒಂದು ಸ್ಪೆಷಲ್ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆಯಂತೆ.

ಈ ವಿಶೇಷ ಹಾಡನ್ನು ಚಿತ್ರತಂಡ ರೆಟ್ರೋ ಸ್ಟೈಲಲ್ಲಿ ಚಿತ್ರೀಕರಿಸಲು ಮುಂದಾಗಿದೆ. ಈ ಹಾಡಿನಲ್ಲಿ ದಕ್ಷಿಣದ ಖ್ಯಾತ ತಾರೆಯೊಬ್ಬರು ಕಾಣಿಸಲಿದ್ದಾರೆ ಎಂಬ ಸುದ್ದಿ ಇದೆ. ಈಗಾಗಲೆ ಕಾಜಲ್ ಅಗರವಾಲ್‌, ತಮನ್ನಾ ಭಾಟಿಯಾ, ಲಕ್ಷ್ಮಿ ರೈ ಮತ್ತು ನೋರಾ ಫತೇಹಿ ಅವರನ್ನು ಸಂಪರ್ಕಿಸಿದೆ ಚಿತ್ರತಂಡ.

ಈ ಹಾಡಿನಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದು ಗೊತ್ತಾಗಬೇಕಾದರೆ ಆಗಸ್ಟ್ 7ರತನಕ ಕಾಯಬೇಕು. ಅಲ್ಲಿಯ ತನಕ ನಿರೀಕ್ಷಿಸಿ ಎಂದಿದೆ ಚಿತ್ರತಂಡ. ಒಟ್ಟಾರೆ ಈ ಸ್ಪೆಷಲ್ ಹಾಡಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಆಗುತ್ತಿದೆ. ಶ್ರೀನಿಧಿ ಶೆಟ್ಟಿ ನಾಯಕಿ. ರಮ್ಯಾ ಕೃಷ್ಣ ಸಹ ತಾರಾಗಣದಲ್ಲಿದ್ದಾರೆ. ಸುಮಾರು 50 ಕೋಟಿ ರೂ. ಬಜೆಟ್ ಸಿನಿಮಾ ಇದು.

Comments are closed.