ಮನೋರಂಜನೆ

ಸಿಎಂ ಆಗಬೇಕೆಂದರೆ ಒಂದೇ ನಿಮಿಷದಲ್ಲಿ ಆಗಿಬಿಡುವೆ… ಆದ್ರೇ

Pinterest LinkedIn Tumblr


ಜೈಪುರ(ರಾಜಸ್ತಾನ): ನಾನು ಯಾವುದೇ ಕ್ಷಣದಲ್ಲಾದರೂ ಮುಖ್ಯಮಂತ್ರಿ ಆಗಬಹುದು ಆದರೆ, ಇತರೆ ಆಸಕ್ತಿಗಳಿಂದ ನಾನು ಮುಕ್ತಳಾಗಿರಲು ಬಯಸುತ್ತೇನೆ. ಇದು ನಟಿ ಕಮ್​ ರಾಜಕಾರಣಿ ಹೇಮ ಮಾಲಿನಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪರಿ.

ಮುಖ್ಯಮಂತ್ರಿಯಾಗುವ ಬಗ್ಗೆ ನಾನು ಹೆಚ್ಚು ಉತ್ಸಾಹವೇನು ಹೊಂದಿಲ್ಲ. ಒಂದು ವೇಳೆ ನಾನು ಸಿಎಂ ಆಗಬೇಕೆಂದು ಬಯಸಿದರೆ, ಒಂದೇ ನಿಮಿಷದಲ್ಲಿ ಆಗುತ್ತೇನೆ. ಆದರೆ, ನನ್ನನ್ನು ನಾನು ಈ ಸ್ಥಾನದಲ್ಲಿ ಕಟ್ಟಿಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಸ್ವಾತಂತ್ರ್ಯಕ್ಕೆ ಕೊನೆಗಾಣಿಸಿದಂತಾಗುತ್ತದೆ ಎಂದು ಉತ್ತರಿಸಿದರು.

ಗುರುವಾರ ಸಂಜೆ ರಾಜಸ್ಥಾನದ ಬನ್ಸ್ವಾರ ಪಟ್ಟಣ ಕಾರ್ಯಕ್ರಮವೊಂದರಲ್ಲಿ ಸಿಎಂ ಆಗುವ ಅದೃಷ್ಟ ಬಂದರೆ ಏನು ಮಾಡುತ್ತೀರಿ ಎಂಬ ವರದಿಗಾರನ ಪ್ರಶ್ನೆಗೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಸಂಸದೆ ಹೇಮಾ ಮಾಲಿನಿ ಉತ್ತರಿಸಿದ್ದು ಹೀಗೆ.

ನನ್ನ ಸಿನಿಮಾ ವೃತ್ತಿಯ ನೆರವಿನಿಂದ ನಾನಿಂದು ಸಂಸದೆಯಾಗಿದ್ದೇನೆ ಎಂದು ಸ್ಮರಿಸಿದ ಅವರು, ನಾನಿಂದು ಎಲ್ಲರಿಗೂ ಪರಿಚಿತಳಾಗಿದ್ದೇನೆ ಅದಕ್ಕೆ ಮುಖ್ಯವಾಗಿ ಬಾಲಿವುಡ್​ನಲ್ಲಿನ ನನ್ನ ಹೆಸರೇ ಕಾರಣ ಎಂದರು.

Comments are closed.