ಮನೋರಂಜನೆ

ಸರಕಾರಿ ಶಾಲೆಗಳಲ್ಲಿನ 400 ಶೌಚಾಲಯಗಳನ್ನು ದುರಸ್ಥಿಗೊಳಿಸಲು ಮುಂದಾಗಿದ ನಟ ಸೂರ್ಯ

Pinterest LinkedIn Tumblr

ಸೆಲೆಬ್ರಿಟಿಗಳು ಕೇವಲ ಸಾಮಾಜಿಕ ಮಾಧ್ಯಮಗಳಲ್ಲಷ್ಟೇ ಅಲ್ಲ, ಸಮಾಜ ಸೇವೆಯನ್ನೂ ಮುಂದಿರುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಇನ್ನೊಂದು ಉದಾಹರಣೆ. ಕಾಲಿವುಡ್ ನಟ ಸೂರ್ಯ ತಮ್ಮ 43ನೇ ಹುಟ್ಟುಹಬ್ಬದ ನಿಮಿತ್ತ ಮಹತ್ವದ ಕೆಲಸಕ್ಕೆ ಕೈಹಾಕಿದ್ದಾರೆ.

ಸರಕಾರಿ ಶಾಲೆಗಳು ಎಂದರೇನೇ ಶಾಲಾ ಕಟ್ಟಡ, ಶೌಚಾಲಯಗಳ ದುಸ್ಥಿತಿಯ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಹಾಗಾಗಿ ಅವರು ತಮ್ಮ ಹುಟ್ಟುಹಬ್ಬವನ್ನು ಭಿನ್ನವಾಗಿ ಸೆಲೆಬ್ರೇಟ್ ಮಾಡಿಕೊಳ್ಳಲು ನಿರ್ಧರಿಸಿದ್ದು ತಮಿಳುನಾಡು ಸರಕಾರಿ ಶಾಲೆಗಳಲ್ಲಿನ 400 ಶೌಚಾಲಯಗಳನ್ನು ದುರಸ್ಥಿಗೊಳಿಸಲು ಮುಂದಾಗಿದ್ದಾರೆ.

ಈ ಮಹತ್ವದ ಕಾರ್ಯವನ್ನು ಅವರು ತಮ್ಮ ಅಗರಂ ಫೌಂಡೇಷನ್ ಮೂಲಕ ಮಾಡಲಿದ್ದಾರೆ. 2006ರಲ್ಲಿ ಆರಂಭವಾದ ಈ ಫೌಂಡೇಷನ್ ತಮಿಳುನಾಡಿನ ಯುವಜನರ ಕನಸುಗಳಿಗೆ ನೀರೆರೆಯುತ್ತಾ ಬಂದಿದೆ. ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಭೇದಭಾವ ಇಲ್ಲದಂತೆ ಎಲ್ಲರಿಗೂ ಅತ್ಯುತ್ತಮ ಶಿಕ್ಷಣವನ್ನು ಈ ಫೌಂಡೇಷನ್ ನೀಡುತ್ತಿದೆ.

ಇತ್ತೀಚೆಗಷ್ಟೇ ಸೂರ್ಯ ತಮಿಳುನಾಡಿನ ರೈತರ ಕ್ಷೇಮಾವೃದ್ಧಿಗಾಗಿ ‘ಕಡೈಕುಟ್ಟಿ ಸಿಂಗಂ’ ಸಿನಿಮಾ ಮೂಲಕ ಬಂದ ಲಾಭದಲ್ಲಿ 1 ಕೋಟಿ ರೂ.ಗಳನ್ನು ದಾನವಾಗಿ ನೀಡಿದ್ದಾರೆ. ಸದ್ಯಕ್ಕೆ ಅವರು ಸಾಯಿ ಪಲ್ಲವಿ ಹೀರೋಯಿನ್ ಆಗಿರುವ NGK ಎಂಬ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ.

Comments are closed.