ಮನೋರಂಜನೆ

ಮಗ ನಾಯಕ; ಅಪ್ಪ ನಿರ್ದೇಶಕ; ತೆಲುಗು ಮಂದಿಯ ಕನ್ನಡ ಸಿನಿಮಾ

Pinterest LinkedIn Tumblr


ತೆಲುಗಿನ ಅನೇಕ ಮಂದಿ ಕನ್ನಡದಲ್ಲಿ ಸಿನಿಮಾ ಮಾಡಲು ಬರುತ್ತಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳು ಸೆಟ್ಟೇರಿವೆ. ಈಗ ಅದಕ್ಕೆ ಹೊಸ ಸೇರ್ಪಡೆ “ರೋಮಿಯೋ ಜೂಲಿಯಟ್‌’. ಹೌದು, “ರೋಮಿಯೋ ಜೂಲಿಯಟ್‌’ ಎಂಬ ಸಿನಿಮಾವೊಂದು ಇತ್ತೀಚೆಗೆ ಸೆಟ್ಟೇರಿದೆ. ಭರತ್‌ ಪಾರೆಪಲ್ಲಿ ಎನ್ನುವವರು ಈ ಸಿನಿಮಾದ ನಿರ್ದೇಶಕರು. ತೆಲುಗಿನಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಭರತ್‌ ಈಗ ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ.

“ರೋಮಿಯೋ ಜೂಲಿಯಟ್‌’ ಚಿತ್ರ ಕೇವಲ ಕನ್ನಡ, ಹಿಂದಿ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದೆ. ಈ ಚಿತ್ರದ ಮೂಲಕ ಭರತ್‌, ತಮ್ಮ ಮಗ ಧನುಶ್‌ ಅವರನ್ನು ಹೀರೋ ಆಗಿ ಲಾಂಚ್‌ ಮಾಡುತ್ತಿದ್ದಾರೆ. ಚಿತ್ರಕ್ಕೆ ಸ್ವಾತಿ ಮಂಡಲ್‌ ನಾಯಕಿ. “ನಾನು ರಾಜಕುಮಾರ್‌ ಸೇರಿದಂತೆ ಅನೇಕ ಕನ್ನಡ ನಟರ ಸಿನಿಮಾಗಳನ್ನು ನೋಡಿದ್ದೇನೆ. ಆ ಕಾರಣದಿಂದ ನನ್ನ ಮಗನನ್ನು ಕನ್ನಡದಲ್ಲೂ ಲಾಂಚ್‌ ಮಾಡಬೇಕೆಂಬ ಮನಸ್ಸಾಯಿತು’ ಎನ್ನುವುದು ಭರತ್‌ ಮಾತು.

ಹೆಸರಿಗೆ ತಕ್ಕಂತೆ “ರೋಮಿಯೋ ಜೂಲಿಯಟ್‌’ ಒಂದು ಲವ್‌ಸ್ಟೋರಿ. ಹಾಗಂತ ರೆಗ್ಯುಲರ್‌ ಶೈಲಿಯಲ್ಲಿ ಈ ಸಿನಿಮಾ ಇರೋದಿಲ್ಲ. ಹೊಸದಾದ ಕಥೆ, ನಿರೂಪಣೆ ಇರುತ್ತದೆ ಎಂಬುದು ನಿರ್ಮಾಪಕರ ಮಾತು. ಈ ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಣ, ಛಾಯಾಗ್ರಹಣ ಕೂಡಾ ಭರತ್‌ ಅವರದೇ.

ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿರುವ ಧನುಶ್‌ಗೆ ಅವರ ತಂದೆ ಮಾಡಿಕೊಂಡಿರುವ ಕಥೆ ಇಷ್ಟವಾಯಿತಂತೆ. “ಕಥೆ ತುಂಬಾ ಚೆನ್ನಾಗಿದೆ. ಒಬ್ಬ ಹೊಸ ಹುಡುಗನ ಲಾಂಚ್‌ಗೆ ಏನೆಲ್ಲಾ ಬೇಕೋ ಆ ಅಂಶದೊಂದಿಗೆ ಕಥೆ ಮಾಡಿದ್ದಾರೆ. ತಂದೆಯ ನಿರ್ದೇಶನದಲ್ಲಿ ಲಾಂಚ್‌ ಆಗುತ್ತಿರುವುದು ಖುಷಿಕೊಟ್ಟಿದೆ’ ಎನ್ನುತ್ತಾರೆ ಧನುಶ್‌. ನಾಯಕಿ ಸ್ವಾತಿ ಕೂಡಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಸಕಲೇಶಪುರ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Comments are closed.