ಮನೋರಂಜನೆ

ನ್ಯೂಯಾರ್ಕ್ ರಸ್ತೆಯಲ್ಲಿ ನಟಿ ಪ್ರಿಯಾಂಕ ಚೋಪ್ರಾ ಡ್ಯಾನ್ಸ್

Pinterest LinkedIn Tumblr

ನ್ಯೂಯಾಕ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನ್ಯೂಯಾರ್ಕ್ ರಸ್ತೆಯಲ್ಲಿ ಮನಬಂದಂತೆ ಡ್ಯಾನ್ಸ್ ಮಾಡಿದ್ದಾರೆ.

ಪ್ರಿಯಾಂಕ ಹಾಲಿವುಡ್‍ನ ‘ಇಸಂಟ್ ಇಟ್ ರೊಮ್ಯಾಂಟಿಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಭಾಗವಾಗಿ ನ್ಯೂಯಾರ್ಕ್ ನ ಬೀದಿಯಲ್ಲಿ ತನ್ನ ಸಹ-ಕಲಾವಿದರಾದ ಲಿಯಮ್ ಹಮ್ಸ್ ವರ್ತ್, ರೆಬೆಲ್ ವಿಲ್ಸನ್ ಹಾಗೂ ಸಹ ನಟರ ಜೊತೆ ನ್ಯೂಯಾರ್ಕ್ ನ ಕಾರ್ನರ್ 40 ಸ್ಟ್ರೀಟ್ ಹಾಗೂ ಮನ್ಹತನ್ ನ ಪಾರ್ಕ್ ಆವೆನ್ಯೂ ರಸ್ತೆಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಇಸ್‍ಂಟ್ ಇಟ್ ರೋಮ್ಯಾಂಟಿಕ್ ಚಿತ್ರ ಹಾಸ್ಯಪ್ರಧಾನ ಚಿತ್ರವಾಗಿದ್ದು, ಈ ಚಿತ್ರದಲ್ಲಿ ರೆಬೆಲ್ ವಿಲ್ಸನ್, ಆಡಮ್ ಡೀವೈನ್, ಲಿಯಮ್ ಹಮ್ಸ್ ವರ್ತ್, ಹಾಗೂ ಬೆಟ್ಟಿ ಗಿಲ್ಪಿನ್ ಕಾಣಿಸಿಕೊಳ್ಳಲಿದ್ದಾರೆ. ಟಾಡ್ ಸ್ಟ್ರಾಸ್- ಶುಲ್ಸನ್ ನಿರ್ದೇಶನ ಮಾಡುತ್ತಿದ್ದು, ಎರಿನ್ ಕಾರ್ಡಿಲ್ಲೊ ಚಿತ್ರಕಥೆಯನ್ನು ಬರೆದಿದ್ದಾರೆ.

ಪ್ರೀತಿಯನ್ನು ನಂಬದೇ ಇರದ ಯುವತಿಯ ಜೀವನದಲ್ಲಿ ರೊಮ್ಯಾಂಟಿಕ್ ಕಾಮಿಡಿಗಳನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಇಸಾಬೆಲ್ಲಾ ಪಾತ್ರ ನಿರ್ವಹಿಸುತ್ತಿದ್ದು, ಯೋಗ ರಾಯಭಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಪ್ರಿಯಾಂಕ ತಮ್ಮ ಚಿತ್ರತಂಡದ ಜೊತೆಯಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, “ಈಗ ಇಲ್ಲಿ ಒಂದು ಫೋಟೋ ಇದೆ. ನಿಮ್ಮ ಜೊತೆ ಶೂಟಿಂಗ್ ಮಾಡಿದ್ದು ಸಾಕಷ್ಟು ಖುಷಿ ನೀಡಿದೆ” ಎಂದು ಬರೆದುಕೊಂಡಿದ್ದಾರೆ.

ಪ್ರಿಯಾಂಕ ಡ್ಯಾನ್ಸ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿಯಾಂಕ ಗುಲಾಬಿ ಬಣ್ಣದ ಸಿಲ್ಟ್ ಡ್ರೆಸ್ ಧರಿಸಿದರೆ, ಲಿಯಾಮ್ ಕಪ್ಪು-ಬಿಳುಪಿನ ಬ್ಲೇಜರ್ ಧರಿಸಿದ್ದಾರೆ. ರೆಬೆಲ್ ವಿಲ್ಸನ್ ಕೆಂಪು ಬಣ್ಣದ ಸ್ಕರ್ಟ್ ಸೂಟ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

Comments are closed.