ಮನೋರಂಜನೆ

ಪುರಿ ಜಗನ್ನಾಥನ ಪವಿತ್ರ ರಥಯಾತ್ರೆ ವೇಳೆ ನಟಿ ಮಹಿಕಾ ಶರ್ಮಾಗೆ ಲೈಂಗಿಕ ಕಿರುಕುಳ ! ದೇವರ ದರ್ಶನ ಪಡೆಯದೇ ವಾಪಸ್

Pinterest LinkedIn Tumblr

ಪಾಕಿಸ್ತಾನ ಕ್ರಿಕೆಟಿಗ ಶಾಹೀದ್ ಆಫ್ರಿದಿ ಮೇಲಿನ ಕ್ರಶ್ ಕುರಿತಂತೆ ನೇಟಿಗರ ಟೀಕೆಗೆ ಗುರಿಯಾಗಿದ್ದ ನಟಿ ಮಹಿಕಾ ಶರ್ಮಾ ಇದೀಗ ಪುರಿ ಜಗನ್ನಾಥ ದೇವಾಲಯದ ಪವಿತ್ರ ರಥಯಾತ್ರೆ ಸಂದರ್ಭದಲ್ಲಿ ತಾವು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಗಿ ಇನ್ಸ್ಟಾಗ್ರಾಮ್ ನಲ್ಲಿ ಬಹಿರಂಗ ಪಡಿಸಿದ್ದಾರೆ.

ಮಹಿಕಾ ಶರ್ಮಾ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ಕೊಟ್ಟ ದೇವರ ದರ್ಶನ ಮಾಡಬೇಕು ಅಂತಿದ್ದರು. ಆದರೆ ಕಿಡಿಗೇಡಿಗಳ ವರ್ತನೆಯಿಂದ ಮನನೊಂದು ದೇವರ ದರ್ಶನ ಪಡೆಯದೇ ವಾಪಸ್ ತೆರಳಿದ್ದಾರೆ.

ಕಾರಿನಿಂದ ಇಳಿದು ದೇವಸ್ತಾನಕ್ಕೆ 20-25 ನಿಮಿಷ ನಡೆಯಬೇಕಿತ್ತು. ನಾನು ನನ್ನ ಸ್ನೇಹಿತರು ನಡೆದುಕೊಂಡು ಹೋಗುತ್ತಿದ್ದಾಗ ಬೇರೆ ರಾಜ್ಯದ ಕೆಲ ಹುಡುಗರು ನನ್ನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಲು ಆರಂಭಿಸಿದರು. ನಂತರ ಹತ್ತಿರ ಬಂದು ಎಳೆದಾಡಿದರು ಎಂದು ಹೇಳಿದ್ದಾರೆ.

ಇದರಿಂದ ಬೇಸರವಾಗಿ ದೇವರ ದರ್ಶನವನ್ನೂ ಮಾಡದೇ ವಾಪಸ್ ಬಂದಿರುವುದಾಗಿ ಮಹಿಕಾ ಶರ್ಮಾ ಹೇಳಿದ್ದಾರೆ.

Comments are closed.