ಮನೋರಂಜನೆ

ಬಾಗಲಕೋಟೆಯ ಮಹಾಕೂಟದಲ್ಲಿ ಪುನೀತ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರೀಕರಣಕ್ಕೆ ಸ್ಥಳೀಯರ ವಿರೋಧ

Pinterest LinkedIn Tumblr

ಬಾಗಲಕೋಟೆ: ನಟ ಪುನೀತ್‌ ರಾಜ್‌ಕುಮಾರ್ ಅಭಿನಯದ ನಟ ಸಾರ್ವಭೌಮ ಸಿನಿಮಾ ಚಿತ್ರೀಕರಣಕ್ಕೆ ಬಾಗಲಕೋಟೆಯ ಮಹಾಕೂಟದಲ್ಲಿ ಅಪಸ್ವರ ಕೇಳಿಬಂದಿದೆ. ಮಹಾಕೂಟೇಶ್ವರ ಪುಷ್ಕರಣಿಯಲ್ಲಿ ಸೆಟ್ ಹಾಕಿರೋದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿನ ಪುಷ್ಕರಣಿಯಲ್ಲಿ ಡಿಗ್ಗಿಂಗ್ ಮಾಡಿ ತಗ್ಗು ತೋಡಿ ಸೆಟ್ ಹಾಕಲಾಗಿದೆ. ಇದರಿಂದ ಅಂತರ್ಜಲಕ್ಕೆ ಧಕ್ಕೆಯಾಗುತ್ತದೆಂದು ವಿರೋಧ ವ್ಯಕ್ತವಾಗಿದೆ. ಉತ್ತರ ಕರ್ನಾಟಕದಲ್ಲಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಮಹಾಕೂಟದ ಹೊಂಡದಲ್ಲಿ ಎಂದೂ ಬತ್ತದ ಅಂತರ್ಜಲ ಇರುತ್ತದೆ.

ಹೊಂಡದಲ್ಲಿನ ಅಂತರ್ಜಲಕ್ಕೆ ಧಕ್ಕೆಯಾಗುತ್ತದೆಂದು ಆತಂಕ ವ್ಯಕ್ತಪಡಿಸಿರುವ ಭಕ್ತರು, ಚಿತ್ರೀಕರಣಕ್ಕೆ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಪವನ್ ಒಡೆಯರ್, ಬಾದಾಮಿ ತಾಲೂಕಿನ ಮಹಾಕೂಟದ ಪುಷ್ಕರಣೆಗೆ ಯಾವುದೇ ಹಾನಿ ಮಾಡಿಲ್ಲ. ಪುಷ್ಕರಣೆ ಶುಚಿಗೊಳಿಸಿ ಸೆಟ್ ಹಾಕಲಾಗಿದೆ. ಈ ಬಗ್ಗೆ ಆತಂಕ ಬೇಡ. ನಮಗೂ ಐತಿಹಾಸಿಕ ತಾಣಗಳ ಬಗ್ಗೆ ಕಾಳಜಿಯಿದೆ. ಇಲ್ಲಿನ ತಾಣಗಳನ್ನು ವಿಭಿನ್ನವಾಗಿ ಚಿತ್ರದ ಮೂಲಕ ತೋರಿಸೋದು ನಮ್ಮ ಪ್ರಯತ್ನ. ಈ ಭಾಗದ ಜನರು ನಮಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.

ಇಲ್ಲಿ ನಾಲ್ಕೈದು ದಿನಗಳ ಕಾಲ ಪ್ರೀ ಕ್ಲೈಮಾಕ್ಸ್ ಚಿತ್ರೀಕರಣ ನಡೆಯಲಿದೆ. ಚಿತ್ರೀಕರಣದಲ್ಲಿ ನಟ ಪುನೀತ್ ರಾಜ್ ಕುಮಾರ್, ರವಿಶಂಕರ್ ಸಹಿತ ಹಲವು ಕಲಾವಿದರು ಭಾಗವಹಿಸಲಿದ್ದಾರೆ.

Comments are closed.