ಮನೋರಂಜನೆ

ಪುನೀತ್ ರಾಜ್ ಕುಮಾರ್ ನಕಲಿ ಖಾತೆಯ ಕುರಿತು ಸ್ಪಷ್ಟನೆ ನೀಡಿದ ಅಭಿಮಾನಿ

Pinterest LinkedIn Tumblr


ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ನಕಲಿ ಖಾತೆ ತೆಗೆದಿದ್ದು ಯಾಕೆ ಎಂಬುದರ ಬಗ್ಗೆ @PuneethOfficial ಖಾತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.

“ಹಾಯ್ ನಮಸ್ಕಾರ ಎಲ್ಲರಿಗೂ.. ನಾನು ಮೊದಲಿಗೆ ಅಪ್ಪು ಸರ್ ಗೆ ಕ್ಷಮೆ ಕೇಳುತ್ತೇನೆ. ನಂತರ ಅಪ್ಪು ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಈ ಫೇಕ್ ಖಾತೆ ತೆಗೆದಿರುವ ಉದ್ದೇಶ ಇಷ್ಟೇ, ಅಪ್ಪು ಸರ್ ಈ ತರಹದ ತಮ್ಮ ಹೆಸರಿನಲ್ಲಿ ಫೇಕ್ ಖಾತೆ ನೋಡಿಯಾದ್ರು ಟ್ವಿಟ್ಟರ್ ಗೆ ಬರಬಹುದೇನೋ ಅಂತಾ ಅಷ್ಟೇ. ಕೆಟ್ಟ ಉದ್ದೇಶ ಏನು ಇಲ್ಲ” ಎಂದು @PuneethOfficial ಖಾತೆಯಲ್ಲಿ ಬರೆಯಲಾಗಿದೆ.

ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿರುವ ಮಾಹಿತಿಯನ್ನು ಜಗ್ಗೇಶ್ ರಿವೀಲ್ ಮಾಡಿ, ಈ ಖಾತೆ ವಿರುದ್ಧ ಕಿಡಿಕಾರಿದ್ದರು. ಅಚ್ಚರಿ ಅಂದರೆ ಸಾಕಷ್ಟು ನಟ ನಟಿಯರು ಪುನೀತ್ ಅಫೀಶಿಯಲ್ ಆಕೌಂಟ್ ಅಂತಾ ಫೋಟೋಗಳನ್ನು ಟ್ಯಾಗ್ ಮಾಡುತ್ತಿದ್ದರು. ಸುಮಾರು 10 ಸಾವಿರಕ್ಕೂ ಜನ ಈ ಜನ ಅಪ್ಪು ಅಫೀಶಿಯಲ್ ಅಕೌಂಟ್ ಎಂದು ತಿಳಿದು ಫಾಲೋ ಮಾಡುತ್ತಿದ್ದರು.

“ಸೆಲಿಬ್ರಿಟಿಗಳ ಬದುಕು ಎಷ್ಟು ಕಷ್ಟ ಅನ್ನೋದು ಇದಕ್ಕೆ. ಕಷ್ಟಪಟ್ಟು ನೋವು ಅಪಮಾನ ಸಹಿಸಿ ಬೆಳೆದ ಮೇಲೆ ಇಂತಹ ಸಮಯ ಸಾಧಕರ ಆಗಮನ ಶ್ರಮವಿಲ್ಲದೆ ಸಾಧಕನ ಹೆಸರು ಬಳಸಿ ಬೆಳೆಯಲು. ಸ್ವತಃ ಪುನೀತನೆ ಹೇಳಬೇಕಾಯಿತು ಅಭಿಮಾನಿಗಳಿಗೆ. ಜಾಲತಾಣ ದುರ್ಬಳಕೆ ಅಂದರೆ ಇದೆ ಅದಕ್ಕೆ ಜನ ಯಾರನ್ನು ನಂಬೋಲ್ಲ. ಇದಕ್ಕಿಂತ ಮೈಬಗ್ಗಿಸಿ ದುಡಿದು ತಿನ್ನಿ ಸ್ವಾಭಿಮಾನದಿಂದ” ಎಂದು ಬರೆದು ಜಗ್ಗೇಶ್ ಟ್ವೀಟ್ ಮಾಡಿದ್ದರು.

ಸದ್ಯ ನಕಲಿ ಖಾತೆ ಬಗ್ಗೆ ಪುನೀತ್ ರಾಜ್‍ಕುಮಾರ್ ಆಪ್ತ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಅಪ್ಪು ಟ್ವಿಟ್ಟರ್ ನಲ್ಲಿ ಯಾವುದೇ ಅಧಿಕೃತ ಖಾತೆಯನ್ನು ಹೊಂದಿಲ್ಲ. ಕೇವಲ ಫೇಸ್ ಬುಕ್‍ನಲ್ಲಿ ಮಾತ್ರ ಅಧಿಕೃತ ಖಾತೆಯನ್ನು ಹೊಂದಿದ್ದಾರೆ. ಅತೀ ಶೀಘ್ರದಲ್ಲೇ ಪುನೀತ್ ರಾಜ್‍ಕುಮಾರ್ ಟ್ವಿಟ್ಟರ್ ನಲ್ಲಿ ಖಾತೆ ತೆರೆಯಲಿದ್ದಾರೆ ಎಂದು ತಿಳಿಸಿದ್ದಾರೆ.

Comments are closed.