ಮನೋರಂಜನೆ

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ಸಂಜು ! 3ನೇ ದಿನಕ್ಕೆ 120 ಕೋಟಿ ಕಲೆಕ್ಷನ್: ಪ್ರಸಕ್ತ ವರ್ಷದ ದಾಖಲೆಗಳೆಲ್ಲಾ ಧೂಳಿಪಟ !

Pinterest LinkedIn Tumblr

ಮುಂಬೈ: ಪಿಕೆ ಚಿತ್ರದ ನಂತರ ಬಾಲಿವುಡ್ ನ ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿ ನಿರ್ದೇಶನದ ನಟ ಸಂಜಯ್ ದತ್ ಅವರ ಜೀವನಾಧಾರಿತ ಸಂಜೂ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.

ನಟ ರಣಬೀರ್ ಕಪೂರ್ ಸಂಜತ್ ದತ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕಳೆದ ಶುಕ್ರವಾ ಬಿಡುಗಡೆಯಾದ ಸಂಜೂ ಚಿತ್ರ ಮೊದಲ ದಿನವೇ 34.75 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 38.60 ಕೋಟಿ ಹಾಗೂ ಮೂರನೇ ದಿನ ಬರೋಬ್ಬರಿ 46.71 ಕೋಟಿ ರುಪಾಯಿ ಕಲೆಕ್ಷನ್ ಮಾಡುವ ಮೂಲಕ ಪ್ರಸಕ್ತ ವರ್ಷದ ಚಿತ್ರಗಳ ಪೈಕಿ ಮೊದಲ ವೀಕೆಂಡ್ ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ.

ಇನ್ನು ಸಲ್ಮಾನ್ ಖಾನ್ ಅಭಿನಯದ ರೇಸ್ 3 ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರದ ದಾಖಲೆಗಳನ್ನು ಸಂಜೂ ಚಿತ್ರ ಉಡೀಸ್ ಮಾಡಿದೆ.

ಯಾವುದೇ ರಜೆ ಇಲ್ಲದ, ಹಬ್ಬವಿಲ್ಲದ ದಿನ ಬಿಡುಗಡೆಯಾದರೂ ಸಂಜೂ ಚಿತ್ರ ಮಾತ್ರ ಬಾಲಿವುಡ್ ನ ಬಾಕ್ಸ್ ಆಫೀಸ್ ನಲ್ಲಿ ಧೂಳೆಬಿಸಿದೆ.

ಪದ್ಮಾವತ್ ಚಿತ್ರ ಮೊದಲ ದಿನ 17.75 ಕೋಟಿ ಹಾಗೂ ರೇಸ್ 3 ಚಿತ್ರ 27.50 ಕೋಟಿ ರುಪಾಯಿ ಗಳಿಸಿತ್ತು. ಈ ವರ್ಷ ತೆರೆ ಕಂಡ ಚಿತ್ರಗಳ ಪೈಕಿ ಸಂಜೂ ಚಿತ್ರ ಮೊದಲ ದಿನದ ಕಲೆಕ್ಷನ್ ನಲ್ಲಿ ಮುಂದಿತ್ತು.

Comments are closed.