ಕರಾವಳಿ

ಮರ ಬಿದ್ದು ಧರೆಗುರುಳಿದ ವಿದ್ಯುತ್ ಕಂಬಗಳು : ಶಾಸಕ ವೇದವ್ಯಾಸ ಕಾಮತ್ ತ್ವರಿತ ಸ್ಪಂದನೆ

Pinterest LinkedIn Tumblr

ಮಂಗಳೂರು : ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಭಾರಿ ಗಾತ್ರದ ಮರಗಳು ಉರುಳುತ್ತಿರುವುದು ಸಾಮಾನ್ಯವಾಗಿದೆ.ಮಂಗಳೂರು ನಗರ ದಕ್ಷಿಣದ ಜಪ್ಪಿನಮೊಗರುವಿನಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಗೆ ಬೃಹತ್ ಮರವೊಂದು ಉರುಳಿ ಬಿದ್ದು ಅವಘಡ ಸಂಭವಿಸಿದೆ.

ಮರ ಬಿದ್ದ ರಭಸಕ್ಕೆ ಅಕ್ಕಪಕ್ಕದ ವಿದ್ಯುತ್ ಕಂಬಗಳು ಧರೆಗುರುಳಿವೆ. ಅಲ್ಲಿ ಭೇಟಿಕೊಟ್ಟ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಕೂಡಲೇ ಫೋನ್ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕೈಗೊಳ್ಳಲು ಸೂಚನೆ ನೀಡಿದರು. ಶಾಸಕರ ಸೂಚನೆ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಮತ್ತು ಪಾಲಿಕೆಯ ಅಧಿಕಾರಿಗಳು ಮರವನ್ನು ತೆರವುಗೊಳಿಸಿ ರಕ್ಷಣಾ ಕಾರ್‍ಯದಲ್ಲಿ ತೊಡಗಿಕೊಂಡಿದ್ದಾರೆ.

Comments are closed.