ಮನೋರಂಜನೆ

ಮಾಜಿ ಹೆಂಡತಿ ರೇಣು ದೇಸಾಯ್ ಮದುವೆಗೆ ಶುಭಹಾರೈಸಿದ ಪವನ್ ಕಲ್ಯಾಣ್

Pinterest LinkedIn Tumblr


ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯ್ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಟಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ ತಮ್ಮ ಭಾವಿ ಪತಿಯ ಬಗ್ಗೆ ಎಳ್ಳಷ್ಟೂ ಸುಳಿವು ಬಿಟ್ಟುಕೊಟ್ಟಿಲ್ಲ ರೇಣು.

ನಿಶ್ಚಿತಾರ್ಥದ ಫೋಟೋವನ್ನು ಮಾತ್ರ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾನು ಎರಡನೇ ಮದುವೆಯಾಗುತ್ತಿರುವುದಾಗಿ ಹೇಳಿದ್ದರು. ಆದರೆ ತಾನು ಕೈಹಿಡಿಯುತ್ತಿರುವ ವ್ಯಕ್ತಿ ಯಾರು ಎಂಬ ವಿವರಗಳನ್ನು ಮಾತ್ರ ರೇಣು ದೇಸಾಯ್ ಬಹಿರಂಗಪಡಿಸಿಲ್ಲ.

ಇದೀಗ ರೇಣು ದೇಸಾಯ್ ಮದುವೆಗೆ ಆಕೆಯ ಮಾಜಿ ಪತಿ ಪವನ್ ಕಲ್ಯಾಣ್ ಶುಭಹಾರೈಸಿದ್ದಾರೆ. “ಹೊಸ ಜೀವನ ಆರಂಭಿಸುತ್ತಿರುವ ರೇಣು ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ನೀವು ಆಯುರಾರೋಗ್ಯದಿಂದ ಸಂತೋಷವಾಗಿ ಇರಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

ಟಾಲಿವುಡ್‌ನಲ್ಲಿ ಈ ಜೋಡಿ ಜಾನಿ, ಬದ್ರಿ ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು. 2009ರಲ್ಲಿ ರೇಣು ಅವರನ್ನು ವರಿಸಿದ್ದರು ಪವನ್ ಕಲ್ಯಾಣ್. ಇವರಿಬ್ಬರ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಇವರಿಬ್ಬರ ಸಾಂಸಾರಿಕ ಜೀವನ ಬಹಳ ದಿನಗಳ ಕಾಲ ಉಳಿಯಲಿಲ್ಲ. 2012 ರಲ್ಲಿ ವಿಚ್ಛೇದನ ಪಡೆದರು. ಆ ಬಳಿಕ ರಷ್ಯಾ ಮೂಲದ ಅನ್ನಾ ಲೆಜ್ನೋವ್‌ರನ್ನು ವರಿಸಿದರು ಪವನ್ ಕಲ್ಯಾಣ್. ಸದ್ಯಕ್ಕೆ ರೇಣು ದೇಸಾಯಿ ತನ್ನ ಮಕ್ಕಳಾದ ಅಕಿರಾ, ಆದ್ಯಾ ಜತೆಗೆ ಪುಣೆಯಲ್ಲಿದ್ದಾರೆ.

Comments are closed.