ಮನೋರಂಜನೆ

ನಟ ಸಂಜಯ್ ದತ್ ಬರೊಬ್ಬರಿ 308 ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಂಡಿದ್ದ !

Pinterest LinkedIn Tumblr

ಮುಂಬೈ: ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಬರೊಬ್ಬರಿ 308 ಮಹಿಳೆಯರೊಂದಿಗೆ ಹಾಸಿಗೆ ಹಂಚಿಕೊಂಡಿದ್ದರು ಎಂದು ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಹೇಳಿದ್ದಾರೆ.

ನಟ ಸಂಜಯ್ ದತ್ ಜೀವನಾಧಾರಿತ ಚಿತ್ರ, ನಟ ರಣ್ ಬೀರ್ ಕಪೂರ್ ಅಭಿನಯದ ಸಂಜು ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಮಾಧ್ಯಮವೊಂದರ ಸಂದರ್ಶನದಲ್ಲಿ ಹಿರಾನಿ ಇಂತಹುದೊಂದು ಸ್ವಾರಸ್ಯಕರ ಅಂಶವನ್ನು ಬಿಚ್ಚಿಟ್ಟಿದ್ದಾರೆ.

‘ಯೌವ್ವನದ ದಿನಗಳಲ್ಲಿ ನಟ ಸಂಜಯ್ ದತ್ ಯುವತಿಯರ ಹಾಟ್ ಫೇವರಿಟ್ ಆಗಿದ್ದರು. ಹೀಗಾಗಿ ಯುವತಿಯರು ಸುಲಭವಾಗಿ ಅವರ ಪ್ರೇಮಪಾಶಕ್ಕೆ ಸಿಲುಕಿ ಬಿಡುತ್ತಿದ್ದರು. ಸಂಜಯ್ ದತ್ ಗೆ ಪ್ರೀತಿ ಎಂಬುದು ಹುಚ್ಚಾಟವಾಗಿತ್ತು. ಸ್ವತಃ ದತ್ ಹೇಳಿಕೊಂಡಂತೆ ಅವರು ಸುಮಾರು 308 ಯುವತಿಯರೊಂದಿಗೆ ಹಾಸಿಗೆ ಹಂಚಿಕೊಂಡಿದ್ದಾರಂತೆ’ ಎಂದು ರಾಜ್ ಕುಮಾರ್ ಹಿರಾನಿ ಹೇಳಿದ್ದಾರೆ.

ಅಂತೆಯೇ ಮಾತು ಮುಂದವೆರಿಸಿದ ಹಿರಾನಿ, ದತ್ ಕೆಲವೊಮ್ಮೆ ತಮಗೆ ಬೇಕಾದ ಯುವತಿಯರನ್ನು ಸ್ಮಶಾನಕ್ಕೆ ಕರೆದೊಯ್ದು, ಅಲ್ಲಿ ತಮ್ಮ ತಾಯಿಯ ಸಮಾಧಿಯ ಮುಂದೆ ನಿಂತು ತಾಯಿಯೊಂದಿಗೆ ಮಾತನಾಡುತ್ತಿದ್ದರಂತೆ. ಇದನ್ನು ಕಂಡ ಆತನ ಗೆಳತಿಯರು ಪ್ರೇಮಪಾಶಕ್ಕೆ ಸಿಲುಕುತಿದ್ದರು. ವಿಶೇಷವೆಂದರೆ ದತ್ ಯುವತಿಯರನ್ನು ಕರೆದೊಯ್ಯುತ್ತಿದ್ದ ಸ್ಮಶಾನ ಮತ್ತು ಸಮಾಧಿ ಅವರ ತಾಯಿ ನರ್ಗಿಸ್ ದತ್ ಅವರ ಸಮಾಧಿಯಾಗಿರಲಿಲ್ಲ. ದತ್ ಭಾವನಾತ್ಮಕತೆಗೆ ಫಿಧಾ ಆಗುತ್ತಿದ್ದ ಹುಡುಗಿಯರು ಸುಲಭವಾಗಿ ಆತನ ಪ್ರೇಮಪಾಶಕ್ಕೆ ಸಿಲುಕಿಬಿಡುತ್ತಿದ್ದರು ಎಂದು ಹೇಳಿದ್ದಾರೆ.

ಇದೇ ವೇಳೆ ದತ್ ಗೆ ಕೈಕೊಟ್ಟ ಪ್ರೇಯಸಿಯ ಕುರಿತು ಮಾತನಾಡಿರುವ ಹಿರಾನಿ, ದತ್ ಗೆ ಪ್ರೇಯಲಿ ಕೈಕೊಟ್ಟರೆ ತಡೆಯಲಾಗುತ್ತಿರಲಿಲ್ಲ. ಹೀಗೆ ಒಂದು ದಿನ ಮಾಜಿ ಪ್ರೇಯಸಿ ಮನೆಗೆ ಕಾರು ತೆಗೆದುಕೊಂಡು ಹೋಗಿ ಮನೆ ಮುಂದೆ ನಿಂತಿದ್ದ ಕಾರಿನ ಢಿಕ್ಕಿ ಹೊಡೆದಿದದ್ದರು. ಆ ಕಾರು ಆ ಮಾಜಿ ಪ್ರೇಯಸಿಯ ನೂತನ ಬಾಯ್ ಫ್ರೆಂಡ್ ನದ್ದಾಗಿತ್ತು. ದತ್ ಹೊಸ ಪ್ರೇಯಸಿ ಸಿಗುವವರೆಗೂ ಹಾಲಿ ಪ್ರೇಯಸಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ದತ್ ಹಲವು ನಟಿಯರ ಜೊತೆ, ತಮ್ಮ ಚಿತ್ರದ ನಾಯಕಿಯರ ಜೊತೆ ಮತ್ತು ತಾವು ಚಿತ್ರರಂಗಕ್ಕೆ ಬರುವ ಮುಂಚೆಯೇ ನಾಯಕಿಯರಾಗಿದ್ದ ನಟಿಯರೊಂದಿಗೂ ಹಾಸಿಗೆ ಹಂಚಿಕೊಂಡಿದ್ದಾರೆ ಎಂದು ಹಿರಾನಿ ಹೇಳಿದ್ದಾರೆ.

ಈ ಹಿಂದಷ್ಟೇ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಸಂಜು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನಲ್ಲಿ ಸಂಜಯ್ ದತ್ ಜೀವನದ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಟ್ರೈಲರ್ ಮೂಲಕ ಸಂಜಯ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್ ದೊಡ್ಡ ಸಂಗತಿಯೊಂದನ್ನು ಬಹಿರಂಗ ಮಾಡಿದ್ದಾರೆ. ಸಂಜಯ್ ದತ್ ಹಾಗೂ ಮಾನ್ಯತಾ ಮುಂದೆ ವಕೀಲೆ ಪ್ರಶ್ನೆಯೊಂದನ್ನು ಕೇಳ್ತಾಳೆ. ಎಷ್ಟು ಜನರ ಜೊತೆ ಈವರೆಗೆ ಮಲಗಿದ್ದೀರಾ ಎಂದು ಪ್ರಶ್ನೆ ಮಾಡ್ತಾಳೆ. ಇದಕ್ಕೆ ಸಂಜಯ್ ವೇಶ್ಯೆಯರನ್ನು ಸೇರಿಸಬೇಕಾ?ಬೇಡ್ವಾ? ಸೇರಿಸ್ತೇನೆ. ಒಟ್ಟು 308 ನೆನಪಿದೆ. ಸೇಫ್ಟಿಗಿರಲಿ 350 ಎನ್ನುತ್ತಾರೆ.

ಸಂಜಯ್ ದತ್ ಜೀವನ ಚರಿತ್ರೆ ಇದೇ ಜೂನ್ 29ರಂದು ತೆರೆ ಮೇಲೆ ಬರಲಿದ್ದು, ಚಿತ್ರದಲ್ಲಿ ಸಂಜಯ್ ದತ್ ರ ವೈವಿದ್ಯಮಯ ಜೀವನವನ್ನು ಪ್ರೇಕ್ಷಕರ ಮುಂದಿಡಲಾಗಿದೆ. ಕಾಲೇಜು, ಸಿನಿಮಾ, ಜೈಲು ಹೀಗೆ ಎಲ್ಲ ವಿಷಯಗಳನ್ನು ತೆರೆ ಮೇಲೆ ಸಂಜಯ್ ಬಿಚ್ಚಿಟ್ಟಿದ್ದಾರೆ.

Comments are closed.