ಮನೋರಂಜನೆ

ಅಜ್ಜಿಯ ಜೊತೆ ಕ್ಯಾಟ್ ವಾಕ್‌ ಮಾಡಿದ ನಟಿ ಹರ್ಷಿಕಾ ಪೂಣಚ್ಚ

Pinterest LinkedIn Tumblr


ಬೆಂಗಳೂರು: ಚಿತ್ರನಟಿಯಾಗಿ, ರೂಪದರ್ಶಿಯಾಗಿ ನೂರಕ್ಕೂ ಹೆಚ್ಚು ಫ್ಯಾಷನ್‌ ಶೋಗಳಲ್ಲಿ ಭಾಗವಹಿಸಿದ್ದೇನೆ. ಕ್ಯಾಟ್ ವಾಕ್‌ ಮಾಡಿದ್ದೇನೆ ಆದರೆ ಈ ಶೋ ನಿಜಕ್ಕೂ ನನ್ನ ಜೀವನದಲ್ಲಿ ಮರೆಲಾಗದ್ದು ಮತ್ತು ವಿಶೇಷವಾದದ್ದು….

ಇದು ನಟಿ ಹರ್ಷಿಕಾ ಪೂಣಚ್ಚ ಅವರ ಮನದಾಳದ ಮಾತುಗಳು.

ಇವರ ಈ ಮನದಾಳದ ಮಾತುಗಳು ಹೊರಬರಲು ವೇದಿಕೆ ಕಲ್ಪಿಸಿಕೊಟ್ಟಿದ್ದು ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್‌.

ತಾಯಂದಿರ ದಿನದ ಅಂಗವಾಗಿ ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್‌ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಎರಡೂ ಪತ್ರಿಕೆಗಳ ಸಿಬ್ಬಂದಿ ಜತೆಗೆ ಗಣ್ಯರು, ಸಿನಿಮಾ ತಾರೆಯರು ಫ್ಯಾಷನ್‌ ಶೋನಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಯೊಬ್ಬರ ತಾಯಿ ಆಗಮಿಸಿದ್ದರು. ಅವರು ಕೂಡ ರ‍್ಯಾಂಪ್‌ ವಾಕ್ ಮಾಡಿದರು. ನಟಿ ಹರ್ಷಿಕ ಪೂಣಚ್ಚ ಅಜ್ಜಿಯ ಕೈ ಹಿಡಿದುಕೊಂಡು ಹೆಜ್ಜೆ ಹಾಕಿದರು.

ಫೇಸ್‌ಬುಕ್‌ನಲ್ಲಿ ಈ ಚಿತ್ರಗಳನ್ನು ಹಾಕಿಕೊಂಡಿರುವ ಹರ್ಷಿಕಾ ಪೂಣಚ್ಚ ವಿಜಯ ಕರ್ನಾಟಕ, ಬೆಂಗಳೂರು ಮಿರರ್‌ ಆಯೋಜಿಸಿದ್ದ ತಾಯಂದಿರ ದಿನದ ರ‍್ಯಾಂಪ್‌ವಾಕ್‌ ನನ್ನ ಜೀವನದ ವಿಶೇಷವಾದದ್ದು ಎಂದು ಬರೆದುಕೊಂಡಿದ್ದಾರೆ.

Comments are closed.