ಮನೋರಂಜನೆ

ಕಾರು ಟೈರ್ ಸ್ಫೋಟ: ನಟ ಪುನೀತ್​ ರಾಜಕುಮಾರ್​ ಪ್ರಾಣಾಪಾಯದಿಂದ ಪಾರು

Pinterest LinkedIn Tumblr


ಬಳ್ಳಾರಿ: ನಟ ಪುನೀತ್​ ರಾಜಕುಮಾರ್​ ಅವರು ಕಾರು ಅಪಘಾತದಿಂದ ಪಾರಾಗಿರುವ ಘಟನೆ ಗುರುವಾರ ರಾತ್ರಿ ಬಳ್ಳಾರಿ ಸಮೀಪದಲ್ಲಿ ನಡೆದಿದೆ. ಅದೃಷ್ಟವಶಾತ್​ ಪುನೀತ್​ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಟಸಾರ್ವಭೌಮ ಚಿತ್ರೀಕರಣ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಈ ಅವಘಡ ನಡೆದಿದೆ. ಕಾರಿನ ಟೈರ್ ಸ್ಫೋಟಗೊಂಡು ಗಾಡಿ ಸೈಡಿಗೆ ಎಳೆದಿದ್ದರಿಂದ ಅಪಘಾತ ಸಂಭವಿಸಿದೆ. ಪುನೀತ್​​ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಬಚಾವ್​ ಆಗಿದ್ದಾರೆ.

ಕೆ.ಎ.೦೫ ಎಂ.ಡಬ್ಲ್ಯೂ ೧೪೪ ನಂಬರಿನ ರೇಂಜ್ ರೋವರ್ ಕಾರಿನಲ್ಲಿ ನಟ ಪುನೀತ್ ಬೆಂಗಳೂರಿಗೆ ತೆರಳುತ್ತಿದ್ದರು. ಪುನೀತ್ ಜತೆ ಗನ್ ಮ್ಯಾನ್ ಹಾಗೂ ಕಾರಿನ ಚಾಲಕರಿದ್ದರು.

Comments are closed.