ಮನೋರಂಜನೆ

ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಫೇಸ್‌ಬುಕ್‌ ಲೈವ್‌ !; ಯುವಕ ಬಂಧನ

Pinterest LinkedIn Tumblr


ಸಿಂಗಾಪುರ್‌: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಬಹುನಿರೀಕ್ಷಿತ ಕಾಲಾ ಚಿತ್ರ ಗುರುವಾರ ನಸುಕಿನ ವೇಳೆಯೇ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವಕನೊಬ್ಬ ಚಿತ್ರವನ್ನು ಫೇಸ್‌ ಬುಕ್‌ ಲೈವ್‌ ಮಾಡಿ ಬಂಧನಕ್ಕೊಳಗಾಗಿರುವ ಘಟನೆ ನಡೆದಿದೆ.

ಕಾಲಾ ಚಿತ್ರವನ್ನು ವೀಕ್ಷಿಸುತ್ತಿದ್ದ ವೇಳೆ ಪ್ರವೀಣ್‌ ಥೇವಾರ್‌ ಎಂಬಾತ 40 ನಿಮಿಷಗಳ ಕಾಲ ಲೈವ್‌ ಮಾಡಿದ್ದಾನೆ. ಲೈವನ್ನು 12,00 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಲೈವ್‌ ಮಾಡುತ್ತಿದ್ದುದನ್ನು ಗಮನಿಸಿದ ರಜನಿ ಅಭಿಮಾನಿಗಳು, ಚಿತ್ರತಂಡವರು ಕೂಡಲೇ ಸಿಂಗಾಪುರ್‌ ಪೊಲೀಸರಿಗೆ ಮಾಹಿತಿ ನೀಡಿ ಪ್ರವೀಣ್‌ ಬಂಧನಕ್ಕೊಳಗಾಗುವಂತೆ ಮಾಡಿದ್ದಾರೆ. ಪ್ರವೀಣ್‌ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಬಿಗ್‌ ಬಜೆಟ್‌ ಚಿತ್ರವಾಗಿರುವ ಕಾಲಾ ಜಾಗತಿಕವಾಗಿ ಚಿತ್ರಮಂದಿರದ ಹಕ್ಕು 230 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.

ಚಿತ್ರ ತಂಡದ ಮನವಿಯ ಹಿನ್ನಲೆಯಲ್ಲಿ ಲೈವ್‌ ಮಾಡಿದ್ದ ವಿಡಿಯೋವನ್ನು ಫೇಸ್‌ಬುಕ್‌ನಿಂದ ಅಳಿಸಿ ಹಾಕಲಾಗಿದೆ.

Comments are closed.