ರಾಷ್ಟ್ರೀಯ

ಐದು ಕೋಟಿ ಸುಲಿಗೆ ಪ್ರಕರಣ: ಪಾತಕಿ ಅಬು ಸಲೇಂ ಗೆ 7 ವರ್ಷ ಜೈಲು

Pinterest LinkedIn Tumblr


ಹೊಸದಿಲ್ಲಿ : ದಿಲ್ಲಿ ಉದ್ಯಮಿಯಿಂದ ಐದು ಕೋಟಿ ರೂ. ‘ರಕ್ಷಣೆ ಹಣ’ ಕೇಳಿದ್ದ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್‌ ಅಬು ಸಲೇಂ ಗೆ ದಿಲ್ಲಿಯ ತೀಸ್‌ ಹಜಾರಿ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಐದು ಕೋಟಿ ರೂ. ರಕ್ಷಣೆ ಹಣ ಕೊಡದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬದವರನ್ನು ಕೊಲ್ಲಲಾಗುವುದು ಎಂಬ ಬೆದರಿಕೆಯನ್ನು ಅಬು ಸಲೇಂ ಒಡ್ಡಿದ್ದ. ಅಬು ಸಲೇಂ ನನ್ನು ನ್ಯಾಯಾಲಯವು ಐಪಿಸಿ ಸೆ.387 ಮತ್ತು ಸೆ.506ರ ಪ್ರಕಾರ 2002ರ ಸುಲಿಗೆ ಕೇಸಿನಲ್ಲಿ ಅಪರಾಧಿ ಎಂದು ಕೋರ್ಟ್‌ ಘೋಷಿಸಿತ್ತು.

ಆದರೆ ಆತನನ್ನು ಮಹಾರಾಷ್ಟ್ರದ ಅತ್ಯಂತ ಕರಾಳ ಮಕೋಕ ಕಾಯಿದೆಯಡಿ ಖುಲಾಸೆ ಗೊಳಿಸಲಾಗಿತ್ತು. ಅಬು ಸಲೇಂ ಜತೆಗೆ ಸಹ ಅಪರಾಧಿಗಳಾಗಿದ್ದ ಪವನ್‌ ಕುಮಾರ್‌ ಅಲಿಯಾಸ್‌ ರಾಜಾ ಭೈಯ್ನಾ, ಮೊಹಮ್ಮದ್‌ ಅಶ್ರಫ್ ಅಲಿಯಾಸ್‌ ಬಾಬು, ಮಾಜೀದ್‌ ಖಾನ್‌ ಅಲಿಯಾಸ್‌ ರಾಜು ಭೈಯ್ನಾ ಮತ್ತು ಚಂಚಲ್‌ ಮೆಹ್ತಾ ಅವರನ್ನು ಕೂಡ ಕೋರ್ಟ್‌ ಖುಲಾಸೆಗೊಳಿಸಿತ್ತು.

ಇದಕ್ಕೆ ಮೊದಲು ಅಬು ಸಲೇಂ ನನ್ನು 1993 ಮುಂಬಯಿ ಸರಣಿ ಬಾಂಬ್‌ ಕೇಸ್‌ನಲ್ಲಿ ಅಪರಾಧಿ ಎಂದು ಘೋಷಿಸಲಾಗಿತ್ತು. ಅಬು ಸಲೇಂನ ಶಿಕ್ಷೆಯ ಪ್ರಮಾಣವನ್ನು ತೀರ್ಮಾನಿಸುವ ವಿಚಾರಣೆಯನ್ನು ಕೋರ್ಟ್‌ ಮೇ 30ಕ್ಕೆ ನಿಗದಿಸಿತ್ತು.

Comments are closed.