ಮನೋರಂಜನೆ

ಮಾಡೆಲ್ ಐಶ್ವರ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟ ಹರ್ಷವರ್ಧನ್

Pinterest LinkedIn Tumblr

ಚಿಕ್ಕಮಗಳೂರು: ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ನಂತರ ರಾಜಾಹುಲಿ ಚಿತ್ರದಿಂದ ಖ್ಯಾತರಾಗಿದ್ದ ನಟ ಹರ್ಷವರ್ಧನ್ ಸದ್ದಿಲ್ಲದೆ ಮಾಡೆಲ್ ಐಶ್ವರ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಹರ್ಷವರ್ಧನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗಜಪಡೆ, ವರ್ಧನ್ ಸಿನಿಮಾಗಳಲ್ಲಿ ಹರ್ಷವರ್ಧನ್ ಅಭಿನಯಿಸಿದ್ದಾರೆ.

ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆ ದಿನಾಂಕ, ಎಲ್ಲಿ ಮದುವೆ ಎಂಬುದು ಇನ್ನು ತಿಳಿದುಬಂದಿಲ್ಲ.

Comments are closed.